ಕೆಜಿಎಫ್ ಎದುರು ನಿಂತ “ಜೆರ್ಸಿ” ಆಟ ನಡೆಯಲಿದೆಯಾ ?
ಕರೋನಾದ ಮೂರನೆ ಅಲೆಯ ನಂತರ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿದ್ದು ಒಂದಾದ ನಂತರ ಮತ್ತೊಂದು ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿವೆ. ಬಾಲಿವುಡ್ ನಟ ಶಾಹಿದ್ ಕುಪೂರ್ ನಟನೆಯ ಬಹು ನಿರೀಕ್ಷಿತ ಚಿತ್ರ ಜೆರ್ಸಿ ಕೂಡ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ.
ಜೆರ್ಸಿ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನ ಘೋಷಿಸಿದ್ದು ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷದ ಡಸೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಒಮಿಕ್ರಾನ್ ಪ್ರಕರಣಗಳು ಹೆಚ್ಚಾದ ಕಾರಣ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿತ್ತು.
ಜೆರ್ಸಿ ಚಿತ್ರದ ನಿರ್ಮಾಪಕ ದಿಲ್ ರಾಜು ಕುರಿತು ಟ್ವೀಟ್ ಮಾಡಿದ್ದಾರೆ. ಎಪ್ರಿಲ್ 14 ರಂದು ಬರಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಶಾಹಿದ್ ಕಪೂರ್ ಗೆ ಜೊತೆಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಈ ಚಿತ್ರ 2019 ರಲ್ಲಿ ತೆರೆಕಂಡ ತೆಲುಗಿನ ಜೆರ್ಸಿ ಚಿತ್ರದ ರೀಮೇಕ್ ಆಗಿದ್ದು ನಾನಿ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿದ್ದರು.
ಇನ್ನೂ ಇದೇ ಎಪ್ರಿಲ್ 14 ರಂದು ಇನ್ನೊಂದು ಬಹು ನಿರೀಕ್ಷಿತ ಚಿತ್ರ ಕೆ ಜಿ ಎಫ್ ತೆರೆಗೆ ಬರಲಿದೆ. ಕೆಜಿಎಫ್ ಎದುರು ಜೆರ್ಸಿ ಬಿಡುಗಡೆಯಾಗುತ್ತಿರುವುದು ಜೆರ್ಸಿ ಚಿತ್ರಕ್ಕೆ ಹಿನ್ನೆಡಯಾಗಲಿದೆ. ಕೆಜಿಎಫ್ ಚಿತ್ರಕ್ಕಾಗಿ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. Shahid Kapoor’s ‘Jersey’ to clash with Yash starrer ‘KGF: Chapter 2’ as it gears up for a theatrical release.
ಇನ್ನು ಕೆ ಜಿ ಎಫ್ ಎದುರು ಈ ಮುಂಚೆ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಚಿತ್ರೀಕರಣ ಪೂರ್ಣಗೊಳ್ಳದ ಕಾರಣ ಲಾಲ್ ಸಿಂಗ್ ಚಡ್ಡಾ ಕೆಜಿಎಫ್ ಗೆ ದಾರಿ ಕ್ಲಿಯರ್ ಮಾಡಿಕೊಟ್ಟಿತ್ತು. ಈಗ ಕೆಜಿಎಫ್ ಎದುರು ಜೆರ್ಸಿಯ ಆಟ ಹೇಗೆ ನಡೆಯಲಿದೆ ಎಂದು ಕಾದು ನೊಡಬೇಕಿದೆ.