KGF 2 ಮುಂದೆ ಗೆಲ್ಲುತ್ತಾ ‘ಜೆರ್ಸಿ’…. KGF 2 ಸ್ಪರ್ಧೆಯೇ ಅಲ್ಲ ಎಂದ ಅಮನ್
ಭಾರತೀಯ ಸಿನಿಮಾರಂಗವೇ ಜಾತಕ ಪಕ್ಷಿಯಂತೆ ಕಾಯುತ್ತಿರುವ ಕೆಜಿಎಫ್ 2 ಗೆ ದೊಡ್ಡ ದೊಡ್ಡ ಸಿನಿಮಾಗಳೇ ಟಕ್ಕರ್ ಕೊಡೋಕೆ ಹಿಂದೇಟು ಹಾಕುತ್ತಿವೆ… ಕೆಜಿಎಫ್ ಒಂದರ ಮುಂದೆ ಬಾಲಿವುಡ್ ಬಾದ್ ಷಾರ ಝೀರೋ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು… ಯಶ್ , ಪ್ರಶಾಂತ ನೀಲ್ ಕಾಂಬಿನೇಷನ್ ನ ಈ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗ್ತಿದೆ… ಇದೇ ದಿನವೇ ಅಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಗೆ ರೆಡಿಯಾಗಿ ನಿಂತಿತ್ತು… ಆದ್ರೀಗ ಸಿನಿಮಾ ರಿಲೀಸ್ ದಿನಾಂಕವನ್ನ ಮುಂದೂಡಲಾಗಿದೆ… ಇದೆಲ್ಲದರ ನಡುವೆ ಇದೀಗ ಹಿಂದಿಯಲ್ಲಿ ಶಾಹಿದ್ ಕಪೂರ್ ನಟನೆಯ ಜರ್ಸಿ ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ… ಇದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು , ಶಾಹಿದ್ ಕಪೂರ್ ಜೆರ್ಸಿ ಸಿನಿಮಾ ಕೆಜಿಎಫ್ ಮುಂದೆ ಮಗುಚಿಕೊಳ್ಳಲಿದೆ ಎಂದೇ ಎಲ್ಲರೂ ಮಾತನಾಡಿಕೊಳ್ತಿದ್ದಾರೆ..
ಆದ್ರೆ ಕೆಜಿಎಫ್ 2 ಸಿನಿಮಾದಿಂದ ನಮ್ಮ ಸಿನಿಮಾಗೆ ಯಾವುದೇ ರೀತಿಯ ಎಫೆಕ್ಟ್ ಆಗುವುದೇ ಇಲ್ಲ ಎನ್ನುತ್ತಿದ್ದಾರೆ ಜೆರ್ಸಿ ನಿರ್ಮಾಕ.. ಜೆರ್ಸಿಯ ನಿರ್ಮಾಪಕ ಅಮನ್ ಗಿಲ್ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ನೀಡಿರುವ ಖಾಸಗಿ ಸಂದರ್ಶನದಲ್ಲಿ , ಎರಡು ಚಿತ್ರಗಳ ನಡುವೆ ಯಾವುದೇ ಸ್ಪರ್ಧೆಯಿಲ್ಲ. ನಾವು ಕೆಜಿಎಫ್- 2 ರೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವಂತೆ ಅಲ್ಲ. ನಮಗೆ ಕೆಜಿಎಫ್- 2 ಸ್ಪರ್ಧಿಯಲ್ಲ, ನಾವು ಕೆಜಿಎಫ್ -2 ಗೆ ಸ್ಪರ್ಧಿಯಲ್ಲ. ಎರಡು ವಿಭಿನ್ನ ಆಯಾಮದ ಚಿತ್ರಗಳಾಗಿದ್ದು ಎರಡು ಚಿತ್ರಗಳು ಗೆಲ್ಲುವ ವಿಶ್ವಾಸವನ್ನು ನಾನು ಹೊಂದಿದ್ದೇನೆ ಅಂತ ಹೇಳಿದ್ದಾರೆ.