ಲಾಲ್ ಸಿಂಗ್ ಚಡ್ಡಾ ಮತ್ತೆ ವಿಳಂಬ – ಬಿಡುಗಡೆ ದಿನಾಂಕ ಮುಂದೂಡಿಕೆ.
ಅಮೀರ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೋಗಿದೆ. ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ನ ಹಿಂದಿ ರಿಮೇಕ್ ಆಗಿರುವ ಈ ಚಿತ್ರವು ಬೈಸಾಖಿ ಹಬ್ಬದ ಸಂದರ್ಭದಲ್ಲಿ ಏಪ್ರಿಲ್ 14, 2022 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ನಿರ್ಮಾಪಕರು ರಿಲೀಸ್ ಡೇಟ್ ಮುಂದೂಡಲು ನಿರ್ಧರಿಸಿದ್ದಾರೆ.
ಚಿತ್ರೀಕರಣ ಇನ್ನೂ ಪೂರ್ಣಗೊಳ್ಳದಿರುವುದು ಇದಕ್ಕೆ ಕಾರಣ. ಹಾಗಾಗಿ ಲಾಲ್ ಸಿಂಗ್ ಚಡ್ಡಾ ನಿರ್ಮಾಪಕರು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. Laal Singh Chaddha delayed again! Aamir Khan-starrer to now release on THIS date
ಆಗಸ್ಟ್ 11, 2022 ಕ್ಕೆ ಲಾಲ್ ಸಿಂಗ್ ಚಡ್ಡಾ
ಅಮೀರ್ ಖಾನ್ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿರುವ ಪ್ರಕಾರ “ನಮ್ಮ ಚಿತ್ರ ಲಾಲ್ ಸಿಂಗ್ ಚಡ್ಡಾ ಪ್ಲಾನ್ ಪ್ರಕಾರ ಏಪ್ರಿಲ್ 14 ರಂದು ಬಿಡುಗಡೆ ಮಾಡುವುದಿಲ್ಲ. ಸರಿಯಾದ ಸಮಯದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ. ಚಿತ್ರವು 11 ಆಗಸ್ಟ್ 2022 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಮುಂದುವರೆದು “ನಾವು ಶ್ರೀ ಭೂಷಣ್ ಕುಮಾರ್, ಟಿಸಿರೀಸ್, ಓಂ ರಾವುತ್ ಮತ್ತು ಆದಿಪುರುಷ ಚಿತ್ರದ ಸಂಪೂರ್ಣ ತಂಡಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಅವರ ಬಹು ನಿರೀಕ್ಷಿತ, ಆದಿಪುರುಷ ಬಿಡುಗಡೆಯ ದಿನಾಂಕವನ್ನು ಬದಲಾಯಿಸಿದ್ದಕ್ಕಾಗಿ, ಲಾಲ್ ಸಿಂಗ್ ಚಡ್ಡಾ 11 ಆಗಸ್ಟ್ 2022 ರಂದು ಬರಬಹುದು ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೊಸ್ಟ್ ಮಾಡಲಾಗಿದೆ.
ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್ನ ಅಧಿಕೃತ ಹಿಂದಿ ರಿಮೇಕ್ ಆಗಿದೆ. 3 ಈಡಿಯಟ್ಸ್ ನಂತರ ಕರೀನಾ ಕಪೂರ್ ಖಾನ್ ಮತ್ತು ಮೋನಾ ಸಿಂಗ್ ಅಮೀರ್ ಗೆ ಜೊಡಿಯಾಗಿದ್ದಾರೆ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ಈ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ.