ಬಾಲಿವುಡ್ ನಲ್ಲೂ ಅಬ್ಬರಿಸಲಿದ್ದಾನೆ ಆಚಾರ್ಯ
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಏಪ್ರಿಲ್ 29 ರಂದು ತೆರೆಗೆ ಬರಲು ಸಜ್ಜಾಗಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಅಂದಹಾಗೆ ಇದೀಗ ಬಂರಿರುವ ಸುದ್ದಿ ಏನಪ್ಪಾ ಅಂದರೇ ಬಾಲಿವುಡ್ ನಲ್ಲೂ ಆಚಾರ್ಯ ಅಬ್ಬರಿಸಲಿದ್ದಾನಂತೆ. ಅಂದರೇ ಆಚಾರ್ಯ ಸಿನಿಮಾ ಹಿಂದಿಯಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆಯಂತೆ. ಇದೇ ಮಾತನ್ನು ಹಿಂದಿಯಲ್ಲಿ ಸಿನಿಮಾವನ್ನು ವಿತರಿಸಲಿರುವ ‘ಪೆನ್ ಸ್ಟುಡಿಯೋಸ್’ ಹೇಳಿದೆ. ಹೀಗಾಗಿ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಳಿಕ ಮೆಗಾ ಸ್ಟಾರ್ ಚಿರಂಜೀವಿ ಮತ್ತೆ ಖಾನ್ ಗಳ ಎದುರು ತೊಡೆತಟ್ಟಲಿದ್ದಾರೆ.
ಅಂದಹಾಗೆ ಕಳೆದ ಶುಕ್ರವಾರ ಮಾಸ್ ಮಹಾರಾಜ ರವಿತೇಜ ಅಭಿನಯದ ‘ಖಿಲಾಡಿ’ ಚಿತ್ರವನ್ನು ಹಿಂದಿಗೆ ‘ಪೆನ್ ಸ್ಟುಡಿಯೋಸ್’ ಡಬ್ ಮಾಡಿ ಬಿಡುಗಡೆ ಮಾಡಿದೆ. ಇವುಗಳ ಹೊರತಾಗಿ ಅವರ ಸ್ಟ್ರೈಟ್ ಬಾಲಿವುಡ್ ಸಿನಿಮಾ ‘ಗಂಗೂಭಾಯ್ ಕಟಿಯವಾಡಿ’ ಇದೇ ತಿಂಗಳ 25 ರಂದು ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್ 25 ರಂದು ‘RRR’ ಬಿಡುಗಡೆಯಾಗಲಿದೆ. ಇವುಗಳ ಜೊತೆಗೆ ‘ಅಟ್ಯಾಕ್ ಪಾರ್ಟ್ 1’ ಜೆರ್ಸಿ ಹಿಂದಿ ರಿಮೇಕ್ ಚಿತ್ರಗಳನ್ನು ಪೆನ್ ಸ್ಟುಡಿಯೋ ಪ್ರೇಕ್ಷಕರ ಮುಂದೆ ತರುತ್ತಿದೆ. ‘ಹಾಗೇ ಆಚಾರ್ಯ’ ಹಿಂದಿ ಆವೃತ್ತಿಯನ್ನು ಏಪ್ರಿಲ್ 29 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಇದರೊಂದಿಗೆ ಮೆಗಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.