Tollywood : ನಮ್ಮ ತಂದೆಗೆ ಅವಮಾನ ಆಗಿದೆ ಎಂದ ಮಂಚು ವಿಷ್ಣು ಪರೋಕ್ಷ ಆರೋಪ ಹೊರಿಸಿದ್ದು ಚಿರಂಜೀವಿ ಅವರ ಮೇಲಾ…???
ಟಿಕೆಟ್ ದರ ವಿಚಾರ ಹಾಗೂ ತೆಲುಗು ಚಿತ್ರರಂಗದ ಇತರೆ ಸಮಸ್ಯೆಗಳ ಬಗ್ಗೆ ನಟ ಚಿರಂಜೀವಿ ನೇತೃತ್ವದಲ್ಲಿ , ಮಹೇಶ್ ಬಾಬು ಸೇರಿದಂತೆ ಕೆಲ ಸ್ಟಾರ್ ನಟರು , ನಿರ್ದೇಶಕ ರಾಜಮೌಳಿ ಸೇರಿದಂತೆ ಹಲವರ ನಿಯೀಗ ಇತ್ತೀಚಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು..
ಆದ್ರೆ ಈ ವಿಷಯ ಟಾಲಿವುಡ್ ನ ಕೆಲವರಲ್ಲಿ ಅಸಮಾಧಾನ ಮೂಡಿಸಿದೆ. ಅದ್ರಲ್ಲೂ ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಮಂಚು ವಿಷ್ಣು , ಜಗನ್ ಜೊತೆ ಮೊದಲು ಸಭೆ ನಡೆದಾಗ ಅಪ್ಪ ಮೋಹನ್ ಬಾಬು ಅವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಕೆಲವರು ಆ ಆಹ್ವಾನವನ್ನು ಬೇಕೆಂದೇ ಅಪ್ಪನಿಗೆ ತಲುಪಿಸಲಿಲ್ಲ. ಯಾರು ಮತ್ತು ಏಕೆ ಹೀಗೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಫಿಲಂ ಚೇಂಬರ್ ನ ಸಭೆಯಲ್ಲಿ ಈ ಬಗ್ಗೆ ನಾನು ಚರ್ಚೆ ಮಾಡಲಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದು , ಪರೋಕ್ಷವಾಗಿ ಅವರು ಚಿರಂಜೀವಿ ಅವರತ್ತ ಬೊಟ್ಟು ಮಾಡಿರುವಂತಿದೆ.
ಜಗನ್ ಜೊತೆ ಮೊದಲು ಸಭೆ ನಡೆದಾಗ ಅಪ್ಪ ಮೋಹನ್ ಬಾಬು ಅವರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಕೆಲವರು ಆ ಆಹ್ವಾನವನ್ನು ಬೇಕೆಂದೇ ಅಪ್ಪನಿಗೆ ತಲುಪಿಸಲಿಲ್ಲ. ಯಾರು ಮತ್ತು ಏಕೆ ಹೀಗೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಫಿಲಂ ಚೇಂಬರ್ನ ಸಭೆಯಲ್ಲಿ ಈ ಬಗ್ಗೆ ನಾನು ಚರ್ಚೆ ಮಾಡಲಿದ್ದೇನೆ ಎಂದು ಮಾಧ್ಯಮಗಳ ಮುಂದೆ ಮಂಚು ವಿಷ್ಣು ಹೇಳಿದ್ದಾರೆ.
ಅಲ್ಲದೇ “ತೆಲುಗು ಸಿನಿಮಾ ರಂಗದ ಪ್ರಸ್ತುತ ಅತ್ಯಂತ ಹಿರಿಯ ಹಾಗೂ ದಂತಕತೆಯಂತಿರುವ ನಟ ನಮ್ಮ ತಂದೆ ಮೋಹನ್ ಬಾಬು. ಆದರೆ ಅವರನ್ನೇ ಇಂಥಹಾ ವಿಷಯದಲ್ಲಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಸರಿಯಲ್ಲ. ಅವರಿಗೆ ಆಹ್ವಾನ ಬಂದಿದ್ದರೂ ಅವರಿಗೆ ನೀಡದೇ ಇರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು, ಅವರನ್ನು ಹೇಗೆ ಸರಿ ಮಾಡಬೇಕು ಎಂಬುದು ಗೊತ್ತಿದೆ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ..