ಶಂಕರ್ – ರಾಮ್ ಚರಣ್ ಸಿನಿಮಾ OTT ಗೆ 350 ಕೋಟಿಗೆ ಸೇಲ್
ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಗೆ ಸೌತ್ ಇಂಡಸ್ಟ್ರಿಯಲ್ಲಿ ಬೇರೆಯದ್ದೇ ಕ್ರೇಜ್ ಇದೆ.. ಸದ್ಯ ರಾಮ್ ಚರಣ್ ಹಾಗೂ ಜ್ಯೂ. NTR ನಟನೆಯ RRR ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿದೆ… ಈ ಸಿನಿಮಾ ಮೂಲಕ ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ..
ಇದರ ಹೊರತಾಗಿ ತಂದೆ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲೂ ರಾಮ್ ಚರಣ್ ನಟಿಸಿದ್ದು , ಈ ಸಿನಿಮಾ ಕೂಡ ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಇದೆ.. ಇನ್ನೂ ಈ ಸಿನಿಮಾಗಳ ನಂತರ ರಾಮ್ ಚರಣ್ ಕೈನಲ್ಲಿ ಸಾಲು ಸಾಲು ಸಿನಿಮಾಗಳಿವೆ… ಒಂದ್ ಲೆಕ್ಕಾಚರದಲ್ಲಿ ಹೇಳೋದಾದ್ರೆ ಎಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳೇ ಆಗಿವೆ..
2025 ರ ವರೆಗೂ ರಾಮ್ ಚರಣ್ ಶೆಡ್ಯೂಲ್ ಫಿಕ್ಸ್ ಆಗಿದೆ. ಅದ್ರಲ್ಲೂ , ಇಂಡಿಯನ್ , ರೋಬೋ , ಅನಿಯನ್ ನಂತಹ ಸೆನ್ಷೇಷನ್ ಸೃಷ್ಟಿ ಸಿನಿಮಾಗಳ ನಿರ್ದೇಶಕರು ರಾಮ್ ಚರಣ್ ರ 15 ನೇ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿರುವುದು… RC15 ಸದ್ಯ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ..
ಎದೆಲ್ಲದರ ನಡುವೆ ಈ ಸಿನಿಮಾ ಬಗ್ಗೆ ಇದೀಗ ದೊಡ್ಡದೊಂದು ಸುದ್ದಿ ಹರಿದಾಡ್ತಿದೆ… ಅದೇನಪ್ಪಾ ಅಂದ್ರೆ RC15 ಸಿನಿಮಾ ಬಿಡುಗಡೆ ಅಲ್ಲ ಆರಂಭಿಕ ಶೂಟಿಂಗ್ ಹಂತದಲ್ಲಿದೆ ಸಿನಿಮಾ.. ಅಷ್ಟ್ರಲ್ಲೇ ಈ ಸಿನಿಮಾ ಒಟಿಟಿಗೆ ದೊಡ್ಡ ಮೊತ್ತಕ್ಕೆ ಸೇಲಾಗಿದ್ಯಂತೆ… ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದ್ದು, ಹಲ್ ಚಲ್ ಸೃಷ್ಟಿಸಿದೆ..
ದಿಲ್ ರಾಜು ನಿರ್ಮಿಸುತ್ತಿರುವ ಈ ಸಿನಿಮಾ 2023 ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ 350 ಕೋಟಿಗೆ ಈ ಸಿನಿಮಾ ಒಪ್ಪಂದ ಮಾಡಿಕೊಂಡಿದ್ಯಂತೆ. ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ಜೀ ಸ್ಟುಡಿಯೋ 350 ಕೋಟಿ ಕೊಟ್ಟು ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ. ಜನಪ್ರಿಯ ವೆಬ್ ಸೈಟ್ ವರದಿ ಮಾಡಿರುವ ಪ್ರಕಾರ, ಈಗಾಗಲೇ ಡೀಲ್ ಪ್ರಕ್ರಿಯೆ ಕೂಡ ಮುಗಿದಿದೆ ಎನ್ನಲಾಗಿದೆ..