Hollywood : ಐರನ್ ಮ್ಯಾನ್ ಅವತಾರವೆತ್ತಿದ ಟಾಮ್ ಕ್ರೂಜ್..!!
ಡಿಸ್ನಿ-ಮಾರ್ವೆಲ್ ಸ್ಟುಡಿಯೋಸ್ ಸಹ-ನಿರ್ಮಾಣದಲ್ಲಿ ಹೊರ ಬರುವ ಅವೆಂಜರ್ಸ್ ಮತ್ತು ಇತರ ಸೂಪರ್ ಹೀರೋ ಚಲನಚಿತ್ರಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.
ಅದರಲ್ಲೂ ಸೂಪರ್ ಹೀರೋ ಸಿನಿಮಾಗಳ ಸರಣಿಯಲ್ಲಿ ಐರನ್ ಮ್ಯಾನ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ.
ಐರನ್ ಮ್ಯಾನ್ ಚಲನಚಿತ್ರ ಸರಣಿಯ ಜೊತೆಗೆ ಅವೆಂಜರ್ಸ್ ಚಲನಚಿತ್ರ ಸರಣಿಯಲ್ಲೂ ಐರನ್ ಮ್ಯಾನ್ ಗೆ ಭಾರಿ ಫಾಲೋಯಿಂಗ್ ಇದೆ,
ಆದರೆ ಅವೆಂಜರ್ಸ್ ಎಂಡ್ ಗೇಮ್ನಲ್ಲಿನ ಐರನ್ ಮ್ಯಾನ್ ಪಾತ್ರವೂ ಕೊನೆಗೊಂಡಿದೆ.
ಆದಾಗ್ಯೂ, ಅವೆಂಜರ್ಸ್ ಎಂಡ್ ಮೇಗ್ ನಂತರ ಬಂದ ಮಾರ್ವೆಲ್ ಸೂಪರ್ ಹೀರೋ ಚಲನಚಿತ್ರಗಳಲ್ಲಿ ಐರನ್ ಮ್ಯಾನ್ ವಾಪಸ್ ಆಗುವ ಬಗ್ಗೆ ಸೂಚನೆಗಳನ್ನು ಕೊಟ್ಟಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಡಾಕ್ಟರ್ ಸ್ಟ್ರೇಂಜ್ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ಚಿತ್ರದಲ್ಲಿ ಐರನ್ ಮ್ಯಾನ್ ವಾಪಸ್ ಆಗುವ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಈ ಪಾತ್ರವನ್ನು ಹಾಲಿವುಡ್ ನ ಖ್ಯಾತ ಆಕ್ಷನ್ ಹೀರೋ ಟಾಮ್ ಕ್ರೂಸ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.
ಇತ್ತೀಚಿನ ಡಾಕ್ಟರ್ ಸ್ಟ್ರೇಂಜ್ ಮಲ್ಟಿವರ್ಸ್ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಚಿತ್ರವು ಮೇ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.