ರಜನಿ 169 ನೇ ಚಿತ್ರಕ್ಕಾಗಿ ಐಶ್ವರ್ಯ ರೈ ಜೊತೆ ಮಾತುಕತೆ….
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 169 ನೆ ಚಿತ್ರಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳ್ತಾರೆ ಅನ್ನೋದು ನಮಗೆಲ್ಲ ತಿಳಿದಿರುವ ವಿಷಯ. ಇದನ್ನ ಅಭಿಮಾನಿಗಳಿಗೆ ತಿಳಿಸಲೆಂದೇ ಚಿತ್ರ ತಂಡ ಚಿಕ್ಕ ಝಲಕ್ ಬಿಡುಗಡೆ ಮಾಡಿ ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ರಜನಿಕಾಂತ್ ಮಾಸ್ ಲುಕ್ ಅನ್ನ ಅನಾವರಣ ಮಾಡಿತ್ತು.
ಇಷ್ಟೆಲ್ಲ ಅಪಡೇಟ್ ಗಳ ನಡುವು ಮತ್ತೊಂದು ಹೊಸ ಗಾಸಿಪ್ ಚಿತ್ರದ ಕುರಿತು ಕೆಳಿ ಬರುತ್ತಿದೆ. ಅದು ರಜನಿ ಪಕ್ಕದಲ್ಲಿ ಜೋಡಿಯಾಗಿ ನಿಲ್ಲುವ ಹೀರೋಹಿನ್ ಯಾರು ಎಂಬುದು. ಸದ್ಯ ಕಾಲಿವುಡ್ ತಲೈವ್ ಗೆ ಸಾಥ್ ನೀಡುವ ತಲೈವಿ ಕುರಿತು ಸಖತ್ ಚರ್ಚೆ ನಡೆಯುತ್ತಿದೆ. ರಜನಿ ಜೊತೆ ಹೆಜ್ಜೆ ಹಾಕಲು ಐಶ್ವರ್ಯ ರೈ ಬಚ್ಚನ್ ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ವದಂತಿಗಳ ಪ್ರಕಾರ ಸೂಪರ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ಅವರನ್ನ ಕರೆತರಲು ಮಾತುಕೆತೆ ನಡೆಸಲಾಗುತ್ತಿದೆ. ಒಂದು ವೇಳೆ ನೆಲ್ಸನ್ ನಿರ್ದೇಶನದ ಚಿತ್ರಕ್ಕೆ ಐಶ್ವರ್ಯ ಬಂದರೆ ಚಿತ್ರಕ್ಕೆ ದೊಡ್ಡ ಹೈಪ್ ಸಿಗಲಿದೆ.
ಈ ಹಿಂದೆ ಶಂಕರ್ ನಿರ್ದೇಶನದ ಎಂದಿರನ್ ಚಿತ್ರದಲ್ಲಿ ಐಶ್ವರ್ಯ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸಿದ್ದರು. ಈ ಚಿತ್ರ ಇಂಡಸ್ಟ್ರಿ ಹಿಟ್ ಆಗಿತ್ತು. ಎಂದಿರನ್ ಬಳಿಕ ಈ ಜೋಡಿ ಮತ್ತೆ ಒಂದಾಗುವ ಸಾದ್ಯತೆ ಇದೆ. ಇನ್ನೂ ಐಶ್ವರ್ಯ ಸುದೀರ್ಘ ವಿರಾಮದ ನಂತರ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಕಾಲಿವುಡ್ ಗ ಪುನರಾಗಮನ ಮಾಡಲಿದ್ದಾರೆ. Aishwarya Rai Bachchan in talks for Rajinikanth and Nelson Dilipkumar’s film?
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿ 169 ನೇ ಸಿನಿಮಾದ ಶೂಟಿಂಗ್ ಏಪ್ರಿಲ್ ತಿಂಗಳಲ್ಲಿ ಶುರುವಾಗಲಿದೆ. ಮುಂದಿನ ಸಂಕ್ರಾಂತಿ ಅಥವಾ ಫೆಬ್ರವರಿಗೆ ಚಿತ್ರವನ್ನ ಬಿಡುಗಡೆ ಮಾಡಬೇಕು ಎನ್ನುವುದು ಚಿತ್ರತಂಡದ ಗುರಿ…