Hijab controversy | ವಿಷ್ಣುದಾದಾ ಪುತ್ಥಳಿ ಅನಾವರಣಕ್ಕೆ ಅಡ್ಡಿ
ಈ ತಿಂಗಳ 20 ರಂದು ಹರಿಹರದಲ್ಲಿ ನಡೆಯಬೇಕಿದ್ದ ವಿಷ್ಣುದಾದಾ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದಾಗಿದೆ. ರಾಜ್ಯದಲ್ಲಿ ಹಿಜಬ್ ಮತ್ತು ಕೇಸರಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ಹೀಗಾಗಿ ಹರಿಹರದಲ್ಲಿ ಹಿಜಬ್-ಕೇಸರಿ ವಿವಾದದ ಕಾರಣದಿಂದಾಗಿ ಕರ್ಫ್ಯೂ ಜಾರಿಯಾಗಿರುವುದರಿಂದ ಯಜಮಾನ್ರ ಪುತ್ಥಳಿ ಅನಾವರಣ ಕಾರ್ಯಕ್ರಮ ರದ್ದಾಗಿದೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ತಮ್ಮ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಕರ್ಫ್ಯೂ ಜಾರಿಯಾಗಿರುವುದರಿಂದ ಯಜಮಾನ್ರ ಪುತ್ಥಳಿ ಅನಾವರಣ ಕ್ಕಾಗಿ ನಾವು ಹರಿಹರಕ್ಕೆ ಹೊರಡುವ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಆದರೆ, ಪುತ್ಥಳಿ ಅನಾವರಣ ನಡೆಯುತ್ತದೆ. ಯಜಮಾನ್ರ ಯಾವ ಕೆಲಸವೂ ಸುಲಭಕ್ಕೆ ಆಗುವುದಿಲ್ಲ ಎಂಬುದು ಮತ್ತೊಮ್ಮೆ ಖಾತ್ರಿಯಾಗಿ ತುಂಬಾ ಬೇಸರವೆನಿಸಿದೆ ಎಂದು ಬರೆದುಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಡಾ.ವಿಷ್ಣು ಅಭಿಮಾನಿಗಳು ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದರು.
ಇದೀಗ ಆ ಕಾರ್ಯಕ್ರಮ ರದ್ದಾಗಿರೋದು ಅಭಿಮಾನಿಗಳಲ್ಲಿ ಬೇಸರ ತಂದಿದೆ.
Hjab controversy dr vishnuvardhan statue harihara