ಮಾಸ್ ಲುಕ್ ನಲ್ಲಿ ವಿನಯ್ ರಾಜ್ ಕುಮಾರ್ ಹೊಸ ಅವತಾರ…
ದೊಡ್ಮನೆ ಮೂರನೇ ಕುಡಿ ವಿನಯ್ ರಾಜ್ ಕುಮಾರ್ ಸಿದ್ಧಾರ್ಥ, ರನ್ ಆಂಟನಿ ಸಿನಿಮಾಗಳ ಮೂಲಕ ಭರವಸೆ ನಾಯಕನಾಗಿ ಮಿಂಚಿದ್ದು, ಈಗ ಪೆಪೆ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.
ಸದ್ಯ ಪೆಪೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ಶೇಕ್ ಮಾಡ್ತಿದೆ.
ವಿನಯ್ ಲವರ್ ಬಾಯ್ ಇಮೇಜ್ ನಿಂದ ಹೊರ ಬಂದು ಮಾಸ್ ಅಂಡ್ ರಗಡ್ ಲುಕ್ ನಲ್ಲಿ ಮಿಂಚಿದ್ದು, ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಇದೇ. ಆ ರಾಕ್ಷಸನಿಗೆ ಅದೇ ಅಂತೆ ಜೀವ. ಎಷ್ಟೋ ಜೀವಗಳನ್ನ ಕೊಂದ ಆ ಜೀವ ಯಾವ್ದು ಅಂತ ಯಾರ್ಗೂ ಗೊತ್ತಿಲ್ಲ. ಅವರ ಆ ಜೀವ ಅಲ್ಲಿಂದ ಮೇಲ್ ಬರೋ ತನಕ ತೊರೆ ನೀರಲ್ಲಿ ರಕ್ತ ಹರಿಯೋದು ನಿಲ್ಲಲ್ಲ. ಹೀಗೆ ಪಂಚಿಂಗ್ ಡೈಲಾಗ್ ಇರುವ ಪೆಪೆ ಟೀಸರ್ ಸಸ್ಪೆನ್ಸ್ ನಿಂದ ಕೂಡಿದೆ.
ಈ ಡೈಲಾಗ್ ಮಧ್ಯೆ ತಾಯಿಯ ಹೆಣದ ಮೇಲೆ ಮಗ ಅಳೋದು..ಬುಲೆಟ್ ಯಿಂದ ಮಚ್ಚು ತೆಗೆಯೋದು. ರಕ್ತದ ಮಡುವಲ್ಲಿ ಬಿದ್ದಿರುವ ವ್ಯಕ್ತಿಯ ಹೆಣ, ರಕ್ತಸಿಕ್ತವಾದ ಮೈಯಲ್ಲಿ ಸ್ನಾನ ಮಾಡೋ ದೃಶ್ಯಗಳು ಕಾಣುತ್ವೆ. ಡೈಲಾಗ್ ಕಂಪ್ಲೀಟ್ ಆಗುತ್ತಿದ್ದಂತೆ ವಿನಯ್ ರಾಜ್ ಕುಮಾರ್ ಎಂಟ್ರಿ, ಅವರನ್ನ ನೋಡಿ ಓಡಿ ಹೋಗುವ ಇಬ್ಬರು ವ್ಯಕ್ತಿಗಳು. ಅಂತಿಮವಾಗಿ ಕೈಯಲ್ಲಿ ಲಾಂಗ್ ಹಿಡಿದು ಹೊಸ ಅವತಾರದಲ್ಲಿ ವಿನಯ್ ರಾಜ್ ಕುಮಾರ್ ಎಂಟ್ರಿ ಅದಕ್ಕೆ ತಕ್ಕಂತೆ ಬಿಜಿಎಂ. ಒಟ್ಟಾರೆ ಟೀಸರ್ ನಲ್ಲಿ ಹೊಸತನ ಎದ್ದು ಕಾಣ್ತಿದೆ. ಅಲ್ಲದೇ ತಮಿಳಿನ ಅಸುರನ್, ಕನ್ನಡದ ಗರುಡ ಗಮನ ರುಷಭ ವಾಹನ ಸಿನಿಮಾವನ್ನ ನೆನಪಿಸುತ್ತಿದೆ.
ಉಳಿದಂತೆ ಈ ಸಿನಿಮಾದಲ್ಲಿ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.
ಪೆಪೆ ಸಿನಿಮಾಗೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿದ್ದು, ಉದಯಶಂಕರ ಎಸ್ ನಿರ್ಮಾಣ ಮಾಡಿದ್ದಾರೆ. ಸಮರ್ಥ ಉಪಾದ್ಯ ಕ್ಯಾಮೆರಾ, ಮನು ಶೇಡ್ಗಾರ್ ಸಂಕಲನವಿದೆ. pepe kannada movie teaser honest review