Hiranya | ರಾಜವರ್ಧನ್ ರ ‘ಹಿರಣ್ಯ’ ಸಿನಿಮಾಗೆ ಅದ್ಧೂರಿ ಚಾಲನೆ…
ಐತಿಹಾಸಿಕ ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಈಗ ಹಿರಣ್ಯ ಸಿನಿಮಾ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಬೆಂಗಳೂರು ನಗರದ ಬಂಡೆ ಮಹಾಕಾಳಮ್ಮ ದೇಗುಲದಲ್ಲಿ ಅದ್ಧೂರಿಯಾಗಿ ಹಿರಣ್ಯ ಸಿನಿಮಾದ ಮುಹೂರ್ತ ನೆರವೇರಿದ್ದು, ರಾಜವರ್ಧನ್ ಹಿರಣ್ಯ ಸಿನಿಮಾಗೆ ಮಾಜಿ ಸಚಿವ ಚಲುವರಾಯ ಸ್ವಾಮಿ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ರಾಜವರ್ಧನ್ ನಟಿಸುತ್ತಿರುವ ಮೂರನೇ ಸಿನಿಮಾ ಹಿರಣ್ಯ. ಈಗಾಗಲೇ ಪ್ರಣಯಂ ಸಿನಿಮಾದಲ್ಲಿ ನಟಿಸುತ್ತಿರುವ ರಾಜವರ್ಧನ್ ಮೂರನೇ ಚಿತ್ರಕ್ಕೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಲಿದ್ದು, ರಾಜವರ್ಧನ್ ಗೆ ನಾಯಕಿಯಾಗಿ ಮಾಡೆಲ್ ರಿಹಾನಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಹಿರಣ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಯೋಗೇಶ್ವರನ್ ಆರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.
ಹಿರಣ್ಯ ಸಿನಿಮಾದ ಟೈಟಲ್ ಡಾಲಿ ಧನಂಜಯ್ ಬಳಿ ಇತ್ತು. ರಾಜವರ್ಧನ್ ಕೇಳಿದ ಕೂಡಲೇ ಗೆಳೆಯನಿಗಾಗಿ ಟೈಟಲ್ ಬಿಟ್ಟುಕೊಟ್ಟಿದ್ದಾರೆ.
Rajavardan’s new film Hiranya officially launched