ಸಿನಿ ಶುಕ್ರವಾರ – 10 ಚಿತ್ರಗಳ ಬಿಡುಗಡೆ, ಯಾರಿಗೆ ಗೆಲವು ? ಯಾರಿಗೆ ಸೋಲು ?
ಕರೋನಾ ಮತ್ತು ಒಮಿಕ್ರಾನ್ ಮೂರನೆ ಅಲೆ ಮುಗಿಯುತ್ತಿದ್ದ ಆಗೆಯೇ ಸ್ಯಾಂಡಲ್ ವುಡ್ ಚಿತ್ರರಂಗ ನಿಧಾನವಾಗಿ ಗರಿ ಬಿಚ್ಚಿಕೊಳ್ಳುತ್ತಿದೆ. ಒಂದರ ಹಿಂದೊಂದು ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಸಿನಿ ಶುಕ್ರವಾರದಂದು ರಿಲೀಸ್ ಆಗುತ್ತಿರು ಕನ್ನಡ ಸಿನಿಮಾಗಳ ಸಂಖ್ಯೆ ಬರೊಬ್ಬರಿ 10 .
ಭಾರಿ ಬಜೆಟ್ ನ ಚಿತ್ರಗಳು ಕೋವಿಡ್ ಕಾರಣದಿಂದ ಮುಂದಕ್ಕೋದ ಕಾರಣ ಮತ್ತು ಮುಂಬರುವ ಪರಭಾಷ ಚಿತ್ರಗಳ ಹಾವಳಿಗಳಿಂದ ತಪ್ಪಿಸಿಕೊಳ್ಳಲು ಸಿಕ್ಕಿರುವ ಈ ಅವಕಾಶದಲ್ಲೆ ಬರೊಬ್ಬರಿ 11 ಚಿತ್ರಗಳ ಬಿಡುಗಡೆಗೆ ನಿರ್ಮಾಪಕರು ಮುಂದಾಗಿದ್ದಾರೆ.
ಭಾವಚಿತ್ರ, ಬಹುಕೃತ ವೇಷ, ಬೈಟು ಲವ್, ದೋಖಾ ದೋಸ್ತಿ, ಪ್ಯಾಮಿಲಿಪ್ಯಾಕ್, ಗರುಡಾಕ್ಷ , ಗಿಲ್ಕಿ, ಮಹಾರುದ್ರಂ, ವರದ, ತುಳುವಿನ ಭೋಜರಾಜ ಎಂಬಿಬಿಎಸ್, ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳು. ಇದರಲ್ಲಿ ಪ್ಯಾಮಿಲಿ ಪ್ಯಾಕ್ ಚಿತ್ರ ಮಾತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಉಳಿದ ಚಿತ್ರಗಳು ನೆರವಾಗಿ ಚಿತ್ರಮಂದಿರಕ್ಕೆ ಲಗ್ಗೆ ಹಾಕಿವೆ.
ಧನ್ವೀರ್ ಮತ್ತು ಶ್ರೀಲೀಲಾ ಅಭಿನಯದ ಬೈಟು ಲವ್ ಸಿನಿಮಾ ಹೊರೆತುಪಡಿಸಿ ಉಳಿದ ಚಿತ್ರಗಳಲ್ಲಿ ಅಷ್ಟಾಗಿ ಸ್ಟಾರ್ ನಟರುಗಳಿಲ್ಲ. ಈ ಎಲ್ಲಾ ಚಿತ್ರಗಳಲ್ಲಿ ಪ್ರೇಕ್ಷಕ ಯಾವುದಕ್ಕೆ ಸೈ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. Cine Friday – releasing 10 films, for whom is it good? Defeat to whom?. bytwolove. sandalwood
ಮುಂದಿನ ದಿನಗಳಲ್ಲಿ ಪುನೀತ್ ನಟನೆಯ ಜೇಮ್ಸ್ ಸುದೀಪ್ ನಟನೆಯ ವಿಕ್ರಾಂತ್ ರೋಣ ಯಶ್ ನಟನೆಯ ಕೆ ಜಿ ಎಫ್ ಚಿತ್ರಗಳು ಥಿಯೆಟರ್ ಗೆ ದಾಳಿ ನಡೆಸಲು ಸಿದ್ಧವಾಗಿವೆ. ಇದರ ನಡುವೆ ತೆಲುಗಿನ RRR ರಾಧೇ ಶ್ಯಾಮ್ ನಂತಹ ಬಿಗ್ ಬಜೆಟ್ ಚಿತ್ರಗಳು ಮುಮದಿನ ದಿನಗಳಲ್ಲಿ ಬಿಡುಗೆಯಾಗಲಿವೆ. ಹಾಗಾಗಿ ಸಿಕ್ಕಿರುವ ಸಮಯದಲ್ಲೇ ಉಳಿದ ಚಿತ್ರಗಳನ್ನ ಬಿಡುಗಡೆ ಮಾಡಿಕೊಳ್ಳುವ ಪ್ಲಾನ್ ಚಿತ್ರ ನಿರ್ಮಾಪಕರದ್ದು…