ಹಲಮಿತಿ ಹಬಿಬೋ ಗೆ ಏರ್ ಪೋರ್ಟ್ ನಲ್ಲಿ ಸಮಂತಾ ಸ್ಟೆಪ್ ….
ದಳಪತಿ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಹಲಮಿತಿ ಹಬಿಬೋಗೆ ಸಾಂಗ್ ಚಾರ್ಟ್ಬಸ್ಟರ್ ಆಗಿದ್ದು ಎಲ್ಲ ಕಡೆ ಗುನುಗುತ್ತಿದೆ. ಈ ಚಿತ್ರದ ಸ್ಟೆಪ್ ಗಳು ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ವೈರಲ್ ಆಗಿದೆ…
ಈಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ ನಟಿ ಸಮಂತ.. ನಟಿ ಸಮಂತಾ ವಿಮಾನ ನಿಲ್ದಾಣದಲ್ಲಿ ಯಾವುದೇ ಪೂರ್ವಸಿದ್ಧತೆಯಿಲ್ಲದೆ ಚಿತ್ರದ ಹಲಮಿತಿ ಹಬಿಬೋ ಅಂತ ಸ್ಟೆಪ್ ಹಾಕಿದ್ದಾರೆ.. ತಡರಾತ್ರಿ ವಿಮಾನದಿಂದ ಇಳಿದ ಬಳಿಕ ಮುಂಬರುವ ಚಿತ್ರ ಬೀಸ್ಟ್ ಹಾಡಿಗ ಹೆಜ್ಜೆ ಹಾಕಿದ್ದಾರೆ.
Samantha grooves to Vijay’s Halamithi Habibo song at airport
ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ತಮಿಳು ಚಿತ್ರ ಬೀಸ್ಟ್ನ ಮೊದಲ ಸಿಂಗಲ್ ಹಲಮಿತಿ ಹಬಿಬೋ ಪ್ರೇಮಿಗಳ ದಿನದಂದು ಬಿಡುಗಡೆಯಾಗಿತ್ತು. ಇನ್ನೂ ಬೀಸ್ಟ್ ನಾಯಕಿ ಪೂಜಾ ಹಗಡೆ ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದು ಅಲ್ಲಿಂದನೇ ಹಲಮತಿ ಹಬೀಬೋ ಅಂತ ರೀಲ್ ಮಾಡಿದ್ದಾರೆ. ನೀವು ಕೂಡ ಇದನ್ನ ಎಲ್ಲಿ ಬೇಕಾದರೂ ಮಾಡಬಹುದು ಎಂದು ಬರೆದುಕೊಂಡಿದ್ದರು. ಇದೇ ಥರ ಬೀಸ್ಟ್ ಸಾಂಗ್ ಗೆ ಟ್ಯೂನ್ ಕಂಪೊಸ್ ಮಾಡಿರುವ ಅನಿರುದ್ಧ ರವಿಚಂದರ್ ಸಹ ರೀಲ್ಸ್ ಮಾಡಿದ್ದಾರೆ.
ಹಲಮತಿ ಹಬೀಬೋ ಸಾಂಗ್ ಬಿಡುಗಡೆಯಾದ ಕ್ಷಣದಿಂದ ಭರ್ಜರಿಯಾಗಿ ಓಡುತ್ತಿದ್ದು ಕೆಲವೇ ದಿನಗಳಲ್ಲಿ 47 ಮಿಲಿಯನ್ ವಿಕ್ಷಣೆಗೆ ಒಳಪಟ್ಟಿದೆ. 2.9 ಮಿಲಿಯನ್ ಲೈಕ್ಸ್ ಗಳಿಸಿದೆ. ಈ ಹಾಡಿಗೆ ನಟ ಶಿವಕಾರ್ತಿಕೇಯನ್ ಸಾಹಿತ್ಯ ರಚಿಸಿದ್ದಾರೆ.