ಕಚ್ಚಾ ಬದಾಮ್ ಹಾಡಿಗೆ 3 ಲಕ್ಷ ಪಡೆದುಕೊಂಡ ಭುವನ್ ಬಡೈಕರ್…
ಕಚ್ಚಾ ಬಾದಮ್ ಎಂಬ ಹಾಡಿನ ಟ್ರೆಂಡ್ ವೈರಲ್ ಆಗಿದ್ದು ಗೊತ್ತೇ ಇದೆ… ಎಲ್ಲಾ ಕಡೆ ಇದರಾ ರೀಲ್ಸ್ ಟ್ರೆಂಡ್ ಆಗ್ತಿವೆ. ಭುವನ್ ಬಡೈಕರ್ ಅವರ ‘ಕಚ್ಚಾ ಬಾದಮ್’ ರಿಮಿಕ್ಸ್ ಹಾಡಿಗಾಗಿ ಮ್ಯೂಸಿಕ್ ಕಂಪನಿ ಅವರಿಗೆ 3 ಲಕ್ಷ ರೂಪಾಯಿಗಳನ್ನು ನೀಡಿದೆ. ಇದಷ್ಟೆ ಅಲ್ಲದೆ ಪಶ್ಚಿಮ ಬಂಗಾಳದ ಪೊಲೀಸರು ಸಹ ಇವರನ್ನ ಅವರನ್ನು ಗೌರವಿಸಿದ್ದಾರೆ. ಇಂಟರ್ ನೆಟ್ ನಲ್ಲಿ ವೈರಲ್ ಆದ ನಂತರ ದೆಹಲಿ, ಮುಂಬೈ ಮತ್ತು ಬಾಂಗ್ಲಾದೇಶದಿಂದಲೂ ಭುವನ್ ಅವರಿಗೆ ಹಲವು ಆಫರ್ಗಳು ಬರುತ್ತಿವೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಭುವನ್ ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದರು. ಕಚ್ಚಾ ಬದಾಮ್ ಹಾಡಿನ್ನ ಚಿತ್ರೀಕರಿಸಿದ್ದಾರೆ ಆದರೆ ಇದಕ್ಕೆ ಹಣವನ್ನು ಪಡೆದುಕೊಂಡಿಲ್ಲ ಎಂದು ಹೇಳಿದ್ದರು. ಇದನ್ನು ಕೇಳಿದ ಅವರ ಅಭಿಮಾನಿಗಳು ಭವನ್ ಹಕ್ಕುಗಳನ್ನು ಕೇಳಲು ಪ್ರಾರಂಭಿಸಿದರು. ಈಗ ಟ್ವಿಲೈಟ್ ಮ್ಯೂಸಿಕ್ ಕಂಪನಿ ಭುವನ್ ಗೆ 3 ಲಕ್ಷ ರೂಪಾಯಿ ನೀಡಿ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ. ಹಣ ಪಡೆದ ನಂತರ ಭುವನ್ ತುಂಬಾ ಸಂತೋಷಗೊಂಡಿದ್ದಾರೆ.
ಭುವನ್ ಕುರಿತು ಮಾತನಾಡಿದ ಟ್ವಿಲೈಟ್ ಬೇಲಾ ಮ್ಯೂಸಿಕ್ನ ಗೋಪಾಲ್ ಘೋಷ್, “ನಾವು ಭುಬನ್ ಡಾ ಅವರೊಂದಿಗೆ 3 ಲಕ್ಷ ರೂ.ಗಳ ಒಪ್ಪಂದವನ್ನು ಮಾಡಿದ್ದೇವೆ. ನಾವು ಈಗಾಗಲೇ ಅವರಿಗೆ 1.5 ಲಕ್ಷ ರೂ.ಗಳನ್ನು ನೀಡಿದ್ದೇವೆ. ನಾವು ಅವರಿಗೆ ಉಳಿದ ಹಣವನ್ನು ಮುಂದಿನ ವಾರ ನೀಡುತ್ತೇವೆ ಎಂದಿದ್ದಾರೆ. Bhuban Badaikar Got 3 Lakh Rupees From Music Company For His Viral Song, Got Offer From Bangladesh
ಭುವನ್ ಅವರ ಪ್ರತಿಭೆಗಾಗಿ ಪಶ್ಚಿಮ ಬಂಗಾಳ ಪೊಲೀಸರು ಸಹ ಗೌರವಿಸಿದ್ದಾರೆ. ಭುವನ್ ಪೊಲೀಸರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಭುವನ್ ಪಶ್ಚಿಮ ಬಂಗಾಳದ ಕುರಲ್ಗುರಿ ಗ್ರಾಮದಲ್ಲಿ ವಾಸಿಸುತ್ತಿರುವ ಸಾಮಾನ್ಯ ಬಡ ವ್ಯಕ್ತಿಯಾಗಿದ್ದಾರೆ. ಹೊಟ್ಟೆಪಾಡಿಗಾಗಿ ಗ್ರಾಮದ ಬೀದಿ ಬೀದಿಗಳಲ್ಲಿ ನೆಲಗಡಲೆ ಮಾರುತ್ತಿದ್ದರು. ಅದನ್ನು ಕ್ರಿಯೇಟಿವ್ ಆಗಿ ಮಾರಾಟ ಮಾಡಲು ಭುವನ್ ‘ಕಚ್ಚಾ ಬಾದಮ್’ ಹಾಡನ್ನು ರಚಿಸಿದ್ದು, ವೈರಲ್ ಆಗಿದೆ.