ಸೆಲ್ಫಿ ವಿಚಾರಕ್ಕೆ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ರಾ ಧನ್ವೀರ್ ???
ಬೈ ಟು ಲವ್ ಚಿತ್ರದ ನಾಯಕ ನಟ ಧನ್ವೀರ್ ವಿರುದ್ದ ಅಭಿಮಾನಿಗೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ನನ್ನ ಮೇಲೆ ಮೇಲೆ ಧನ್ವೀರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಎಂಬ ಅಭಿಮಾನಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ನಟ ಧನ್ವೀರ್ ಹಾಗೂ ಆತನ ಬಾಡಿಗಾರ್ಡ್ ವಿರುದ್ದ ಇಬ್ಬರು ಸೇರಿಕೊಂಡು ನಿನ್ನೆ ಅನುಪಮಾ ಥಿಯೇಟರ್ ನಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಾತ್ ರೂಮ್ ಗೆ ಎಳೆದುಕೊಂಡು ಹೋಗಿ ನಟ ಧನ್ವೀರ್ ಹಾಗೂ ಆತನ ಬಾಡಿಗಾರ್ಡ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಕರ್ ದೂರಿದ್ದಾರೆ.
ಧನ್ವೀರ್ ಜೊತೆ ಪೋಟೋ ತೆಗೆಸಿಕೊಳ್ಳಲು ಚಂದ್ರಶೇಖರ್ ಮುಂದಾಗಿದ್ದಾನೆ. ಧನ್ವೀರ್ ಇದಕ್ಕೆ ನಿರಾಕರಿಸಿದ್ದು ಧ್ರವಸರ್ಜಾ ಬಳಿ ಪೋಟೋ ತೆಗೆದುಕೊಳ್ಳೊದಾಗಿ ಹೇಳಿದ್ದ ಚಂದ್ರಶೇಖರ್ ಹೇಳಿದ್ದಾನೆ. ಇಷ್ಟಕ್ಕೆ ನನ್ನನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಅಭಿಮಾನಿ ಆರೋಪಿಸಿದ್ದಾನೆ.
ಫೆಬ್ರವರಿ 18ರ ಶುಕ್ರವಾರ ಧನ್ವೀರ್ ಅವರ ‘ಬೈ ಟೂ ಲವ್’ ಚಿತ್ರ ತೆರೆಗೆ ಬಂದಿತ್ತು. ಇದರ ಸಲುವಾಗಿ ನಿನ್ನೆ ಅನುಪಮಾ ಥಿಯೇಟರ್ ಬಳಿ ನಟ ಧನ್ವೀರ್ ಬಂದಿದ್ದರು. ಈ ವಿಷಯದ ಕುರಿತು ಧನ್ವೀರ್ ಯಾವುದೇ ಹೇಳಿಕೆಯನ್ನ ನೀಡಿಲ್ಲ. ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ.