ಕುಡಿದು ಕಾರು ಚಾಲನೆ ನಟಿ, ಕಾವ್ಯ ಥಾಪರ್ ಬಂಧನ…..
ಕುಡಿದು ಕಾರು ಚಾಲನೆ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದದ್ದಲ್ಲದೇ ಪೊಲೀಸ್ ಸಿಬ್ಬಂದಿಯನ್ನ ಅವ್ಯಾಚವಾಗಿ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ನಟಿ ಕಾವ್ಯ ಥಾಪರ್ ಅವರನ್ನ ಪೊಲೀಸರು ಬಂಧಿಸಿರುವ ಘಟನೆ ಮುಂಬೈ ನಗರದ ಜುಹು ನಲ್ಲಿ ನಡೆದಿದೆ.
ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ 26 ವರ್ಷದ ನಟಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ (ಫೆಬ್ರವರಿ 17) ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜುಹುವಿನ ಜೆ ಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಥಾಪರ್ ಅವರು ಮದ್ಯದ ಅಮಲಿನಲ್ಲಿ ಎಸ್ಯುವಿ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಾದಾಚಾರಿಯೊಬ್ಬರು ಇದನ್ನ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನ ನೋಡಿದ ನಟಿ ಕಾವ್ಯ ಅವರ ಮೇಲೆ ನಿಂಧಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಟಿ ವಿರುದ್ಧ ಐಪಿಸಿ ಮತ್ತು ಮೊಟಾರು ವಾಹನಗಳ ಕಾಯ್ದೆಯಡಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮತ್ತು ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿ ಅಡಿಯಲ್ಲಿಮ ಪ್ರಕರಣ ದಾಖಲಿಸಲಾಗಿದೆ. Kavya Thapar Arrested By Mumbai Police; Accused Of Drunk N Driving, Scuffle With Police And Accident.