10 ನೇ ರೀಮೇಕ್ ಸಿನಿಮಾ ಮಾಡಲಿರುವ ದೇವಗನ್ ಅಜಯ್….!!!
ಅಜಯ್ ದೇವಗನ್ ಅವರು ಹತ್ತನೇ ರೀಮೇಕ್ ಸಿನಿಮಾ ಮಾಡಲು ಹೊರಟಿದ್ದಾರೆ… ಇದು ತಮಿಳಿನ ಸೂಪರ್ ಹಿಟ್ ಸಿನಿಮಾದ ರೀಮೇಕ್ ಆಗಿದೆ.
ತಮಿಳಿನ ಸೂಪರ್ ಹಿಟ್ ಸಿನಿಮಾ ಸ್ಟಾರ್ ನಟ ಕಾರ್ತಿ ನಟನೆಯ ‘ಕೈದಿ’ ಸಿನಿಮಾವನ್ನ ಅಜಯ್ ದೇವಗನ್ ಅವರು ಹಿಂದಿಗೆ ರೀಮೇಕ್ ಮಾಡಲು ಹೊರಟಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿರುವ ಕಬರ್ ಪ್ರಕಾರ ಇನ್ನೊಂದು ವಾರದಲ್ಲಿ ಸಿನಿಮಾ ಸೆಟ್ಟೇರೋದು ಗ್ಯಾರಂಟಿ ಎನ್ನಲಾಗ್ತಿದೆ.
ಉತ್ತರ ಭಾರತದ ಜನರ ಅಭಿರುಚಿಗೆ ತಕ್ಕಂತೆ ಈ ಸಿನಿಮಾದಲ್ಲಿ ಕೆಲ ಎಲಿಮೆಂಟ್ಸ್ ಬದಲಾವಣೆ ಮಾಡಿಕೊಳ್ಳಲಾಗುತ್ತದೆ.. ಅಂದ್ಹಾಗೆ ಅಜಯ್ ದೇವಗನ್ ಅವರು ಈಗಾಗಲೇ ಸುಮಾರು 9 ಸೌತ್ ಸಿನಿಮಾಗಳ ರೀಮೇಕ್ ಮಾಡಿದ್ದು ,, ಗೆಲುವು ಕಂಡಿದ್ದಾರೆ.. ತಮಿಳಿನ ಸಿಂಗಂ , ಮಲಯಾಳಂನ ದೃಶ್ಯಂ , ದೃಶ್ಯಂ 2 ಸೇರಿದಂತೆ ಇನ್ನೂ ಹಲವು ಸಿನಿಮಾಗಳ ರೀಮೇಕ್ ಮಾಡಿದ್ದಾರೆ…
ಪ್ರಸ್ತುತ ಅಜಯ್ ದೇವಗನ್ ಅವರು ರಾಜಮೌಳಿ ಅಭಿನಯದ RRR ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಈ ಸಿನಿಮಾ ಶೀಘ್ರವೇ ರಿಲೀಸ್ ಆಗಲಿದೆ.. ಇದರ ಹೊರತಾಗಿ ಗಂಗೂಭಾಯಿ ಕಾಥೇಯವಾಡಿ, ಮೈದಾನ್ , ರುದ್ರ: ದಿ ಎಡ್ಜ್ ಆಫ್ ಡಾರ್ಕ್ ನೆಸ್ , ರನ್ವೇ 34 ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..