BEAST : ಪ್ಯಾನ್ ವರ್ಲ್ಡ್ ಸಾಂಗ್..!!
ದಳಪತಿ ವಿಜಯ್, ಪೂಜಾ ಹೆಗ್ಡೆ ಅಭಿನಯದ ಚಿತ್ರ ಬೀಸ್ಟ್. ಈ ಸಿನಿಮಾ ತಂಡದಿಂದ ಇತ್ತೀಚೆಗೆ ರಿಲೀಸ್ ಆದ ಅರೇಬಿಕ್ ಸಾಂಗ್ ಸೋಶಿಯಲ್ ಮೀಡಿಯಾವನ್ನ ಶೇಕ್ ಮಾಡುತ್ತಿದೆ. ಸಾಂಗ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿತ್ತು. ಇದರೊಂದಿಗೆ ಅರೇಬಿಕ್ ಕುತು ಹಾಡು, ಪಾನ್ ವರ್ಲ್ಡ್ ಸಾಂಗ್ ಆಗಿ ಸೋಷಿಯಲ್ ಮೀಡಿಯಾವನ್ನ ನಡುಗಿಸುತ್ತಿದೆ. ಈ ಹಾಡಿನಲ್ಲಿ ವಿಜಯ್ ಮತ್ತು ಪೂಜೆ ಹಾಕಿರುವ ಸ್ಟೆಪ್ಸ್ ವೈರಲ್ ಆಗುತ್ತಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಎಲ್ಲರೂ ಹಾಡಿ ಪಿಧಾ ಆಗಿದ್ದಾರೆ. ಹಲಮಿತಿ ಹಬೀಬೋ ಇನ್ಸ್ಟಾಗ್ರಾಮ್ ಗೆ ಬೆಂಕಿ ಹಚ್ಚಿದ್ದು, ಇತ್ತೀಚೆಗೆ ಸಮಂತಾ ಕೂಡ ಈ ಹಾಡಿಗೆ ರೀಲ್ಸ್ ಮಾಡಿದ್ದರು.
ತಮಿಳಿನ ಕ್ರೇಜಿ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಸಂಯೋಜಿಸಿರುವ ಈ ಹಾಡಿಗೆ ನಟ ಶಿವಕಾರ್ತಿಕೇಯನ್ ಸಾಹಿತ್ಯ ಒದಗಿಸಿದ್ದಾರೆ. ಈಗ 60 ಮಿಲಿಯನ್ ವೀವ್ಸ್ ಕ್ರಾಸ್ ಮಾಡಿರುವ ಹಾಡು, 48 ಗಂಟೆಯೊಳಗೆ ಗ್ಲೋಬಲ್ ಟಾಪ್ ಸಾಂಗ್ಸ್ ಲಿಸ್ಟ್ ನಲ್ಲಿ ಸ್ಥಾನ ಪಡೆಯುವ ಮೂಲಕ ದಾಖಲೆಯನ್ನೂ ನಿರ್ಮಿಸಿದೆ. ಇನ್ನು ಬೀಸ್ಟ್ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ. ಏಪ್ರಿಲ್ 14 ರಂದು ಸಿನಿಮಾ ಥಿಯೇಟರ್ ಗಳಿಗೆ ಬರಲಿದೆ ಎಂದು ಮೇಕರ್ಸ್ ತಿಳಿಸಿದ್ದಾರೆ.