ಬಣ್ಣದ ಜಗತ್ತಿನಲ್ಲಿ ರಾಜಕೀಯದ ‘ರಾಜಾಹುಲಿ’ ದರ್ಬಾರ್….!!!!
ಬೆಂಗಳೂರು: ರಾಜಕೀಯದಲ್ಲಿ ರಾಜಾಹುಲಿ ,, ಕರುನಾಡಿಗೆ ನಾಲ್ಕು ಬಾರಿ ಸಿಎಂ ಆಗಿದ್ದ , ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇದೀಗ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ…
ಹೌದು.. ಬಿ. ಎಸ್. ಯಡಿಯೂರಪ್ಪ ಅವರು ಈಗ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ… ನೈಜ ಘಟನೆ ಆಧಾರಿತ ಸಿನಿಮಾ ‘ತನುಜಾ’ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕಾಣಿಸಿಕಳ್ತಿದ್ದಾರೆ…
ವಿಶೇಷ ಅಂದ್ರೆ ಈ ಸಿನಿಮಾದ ಕಥೆ , ಸತ್ಯ ಕಥೆಯಾಗಿದ್ದು , ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ಅಂದ್ರೆ ಮೊದಲ ಕೋವಿಡ್ ಸಮಯದಲ್ಲಿ ನಡೆದಿದ್ದ ಸನ್ನಿವೇಷ , ಸತ್ಯ ಘಟನೆಯನ್ನ ಆಧರಿಸಿದೆ… ಬಿಎಸ್ವೈ ಅವರೇ ಸಿಎಂ ಆಗಿದ್ದ ವೇಳೆ ತನುಜಾ ಎಂಬ ವಿದ್ಯಾರ್ಥಿನಿ ಕೋವಿಡ್ ಕಾರಣದಿಂದ ನೀಟ್ ಪರೀಕ್ಷೆ ಬರೆಯಲಾಗದೆ ತನ್ನ ಅಸಹಾಯಕತೆ ತೋಡಿಕೊಂಡಿದ್ದಳು.
ಇವರೊಂದಿಗೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ವಿಶೇಷ.. ಶನಿವಾರ ಮೊದಲ ದಿನ ಅವರ ಭಾಗದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ. ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ.ಹಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ.
ಬಳಿಕ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಅವರ ಮುಖೇನ ಬಿಎಸ್ ವೈ ಸಹಾಯದಿಂದ ಪರೀಕ್ಷೆ ಬರೆದಿದ್ದಳು. ನಂತರ ನೀಟ್ ಪರೀಕ್ಷೆ ಪಾಸಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ತನುಜಾ ಸುಮಾರು 350 ಕಿ.ಮೀ ದೂರದಿಂದ ಬಂದು ಪರೀಕ್ಷೆ ಬರೆದಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಇದನ್ನೇ ಒನ್ಲೈನ್ ಸ್ಟೋರಿ ಮಾಡಿಕೊಂಡು ಸಾಮಾಜಿಕ ಕಳಕಳಿಯುಳ್ಳ ಕಂಟೆಂಟ್ ಬೇಸಡ್ ಸಿನಿಮಾ ಮಾಡಲಾಗಿದೆ..