ಅಭಿಮಾನಿ ಮೇಲೆ ನಿಜವಾಗಲೂ ಹಲ್ಲೆ ಮಾಡಿದ್ರಾ ಧನ್ವೀರ್ ,,,, ನಟ ಹೇಳಿದ್ದೇನು..??
ಧನ್ವೀರ್ ಹಾಗೂ ಶ್ರೀಲೀಲಾ ನಟನೆಯ ಕ್ಯೂಟ್ ಲವ್ ಸ್ಟೋರಿ ಹೊಂದಿರುವ ಬೈ ಟೂ ಲವ್ ಸಿನಿಮಾ ಶುಕ್ರವಾರವಷ್ಟೇ ರಿಲೀಸ್ ಆಗಿದ್ದು , ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿದೆ… ಆಲ್ ಮೋಸ್ಟ್ ಎಲ್ಲೆಡೆ ಹೌಸ್ ಫುಲ್ ಆಗಿ ಓಡುತ್ತಿದೆ…
ಈ ನಡುವೆ ನಟ ಧನ್ವೀರ್ ವಿವಾದ ವೊಂದ್ರಲ್ಲಿ ಸಿಲುಕಿದ್ದಾರೆ.. ಒಂದೆಡೆ ಸಿನಿಮಾ ಪ್ರಚಾರವನ್ನೂ ಮಾಡುತ್ತಿರುವ ಧನ್ವೀರ್ ಮೇಲೆ ಅಭಿಮಾನಿ ಮೇಲೆ ಹಲ್ಲೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ..
ಗುರುವಾರ ಫೆ 17 ರಂದು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಉಪ್ಪಾರ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..
ಈ ಕುರಿತು ಹುಬ್ಬಳ್ಳಿಯಲ್ಲಿ ಸಿನಿಮಾ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಸ್ಪಷ್ಟನೆ ಕೊಟ್ಟ ಧನ್ವಿರ್ , ಕೆಲವು ಕಿಡಿಕೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಯಾರು ಮಾಡುತ್ತಿದ್ದಾರೆ ಅಂತ ನನಗೆ ಗೊತ್ತು. ಘಟನೆ ಬಗ್ಗೆ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇನೆ. ಎಲ್ಲದಕ್ಕೂ ಬೆಂಗಳೂರಿನಲ್ಲಿ ಉತ್ತರ ನೀಡುತ್ತೇನೆ ಎಂದಿದ್ದಾರೆ
ಸದ್ಯ ನಾನು ಬೈಟು ಲವ್ ಚಿತ್ರದ ಪ್ರಚಾರದಲ್ಲಿದ್ದೇನೆ. ಇದರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಹಲ್ಲೆಯ ಘಟನೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಪ್ರಶ್ನೆಗೆ ಉತ್ತರ ನೀಡುತ್ತೇನೆ ಎಂದಿದ್ದಾರೆ.