ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಫರ್ಹಾನ್ ಅಖ್ತರ್ ಶಿಬಾನಿ ದಾಂಡೇಕರ್….
ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಫೆಬ್ರವರಿ 19 ರಂದು ಸರಳವಾಗಿ ಮದುವೆಯಾಗಿದ್ದಾರೆ. ಫರ್ಹಾನ್ ಅಖ್ತರ್ ಅವರ ತಂದೆ ಜಾವೇದ್ ಅಖ್ತರ್ ಹಾಗೂ ತಾಯಿ ಶಬಾನಾ ಅಜ್ಮಿ ಅವರ ನಿವಾಸದಲ್ಲಿ ವಿವಾಹ ಸಮಾರಂಭ ನೆರವೇರಿದೆ.
ಸಮಾರಂಭದಲ್ಲಿ ಫರ್ಹಾನ್ ಅಖ್ತರ್ ಸಹೋದರಿ ಜೋಯಾ ಅಖ್ತರ್, ನಟಿ ರಿಯಾ ಚಕ್ರವರ್ತಿ, ಶಿಬಾನಿ ಸಹೋದರಿ ಅನುಷಾ ದಂಡೇಕರ್, ನಟ ಹೃತಿಕ್ ರೋಷನ್, ಗಾಯಕ ಶಂಕರ್ ಮಹದೇವನ್ ಮುಂತಾದವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. Farhan Akhtar and Shibani Dandekar got married on February 19.
48 ವರ್ಷದ ಫರ್ಹಾನ್ 41 ರ ಪ್ರಾಯದ ಶಿಬಾನಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫರ್ಹಾನ್ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾಗ ಶಿಬಾನಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು ಅಲ್ಲಿ ಇವರಿಬ್ಬರ ಮೊದಲ ಬೇಟಿಯಾಗಿತ್ತು. ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಸಿಕ್ಕ ಬಳಿಕ ದಂಪತಿಗಳಾಗುತ್ತಿದ್ದಾರೆ.
ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಈ ತಿಂಗಳ ಕೊನೆಯಲ್ಲಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿದ ನಂತರ ಅರತಕ್ಷತೆ ಇಟ್ಟುಕೊಳ್ಳಲಾಗಿದೆ. ಕೋವಿಡ್-19 ಪ್ರೋಟೋಕಾಲ್ ಗಳನ್ನ ಫಾಲೋಮಾಡುವ ಸಲುವಾಗಿ ಕೇವಲ ನಿಕಟ ಸ್ನೇಹಿತರು ಮತ್ತು ಕುಟುಂಬದ ಉಪಸ್ಥತಿಯಲ್ಲಿ ಮದುವೆ ಕಾರ್ಯಕ್ರಮ ಮುಗಿದಿದೆ.