ಪ್ರಭಾಸ್ ಅವರ ಅತಿ ದೊಡ್ಡ ಕನಸು ನನಸಾಗಿದ್ದು ಹೇಗೆ..??
ಹೈದ್ರಾಬಾದ್ : ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ವಿಶ್ವಾದ್ಯಂತ ಅಭಿಮಾನಿಗಳನ್ನ ಗಳಿಸಿರುವ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಅವರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾ ‘ರಾಧೆ ಶ್ಯಾಮ್’ ರಿಲೀಸ್ ಹಂತದಲ್ಲಿದೆ… ಮತ್ತೊಂದೆಡೆ ಪ್ರಶಾಂತ್ ನೀಲ್ ಜೊತೆಗೆ ‘ಸಲಾರ್’ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಇತ್ತ ಆದಿಪುರುಷ್ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಮುಂದೆ ಸ್ಪಿರಿಟ್ ಸೇರಿದಂತೆ ಇನ್ನಿತರೇ ಪ್ರಾಜೆಕ್ಟ್ ಗಳು ಅವರ ಕೈಯಲ್ಲಿದೆ.. ಇದೀಗ ಆದಿಪುರುಷ್ ಮುಗಿದ ಬೆನ್ನಲ್ಲೇ ಈಗ ಪ್ರಾಜೆಕ್ಟ್ ಕೆ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಇದೇ ಸಿನಿಮಾದಿಂದಲೇ ಪ್ರಭಾಸ್ ಅವರ ಅತಿ ದೊಡ್ಡ ಕನಸು ನನಸಾಗಿದೆ..
ಹೌದು… ಈ ವಿಚಾರವನ್ನು ಸ್ವತಃ ನಟ ಪ್ರಭಾಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಈ ಸಿನಿಮಾಗೆ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತಿದ್ದಾರೆ. ಸಿನಿಮಾದ ಚಿತ್ರೀಕರಣ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಭಾಗಿ ಆಗಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಬಾಲಿವುಡ್ ನ ಬಿಗ್ ಬಿ , ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರು ನಟಿಸುತ್ತಿದ್ದಾರೆ… ಹೀಗಾಗಿ ಪ್ರಭಾಸ್ ಜೊತೆಗೆ ಅಭಿಮಾನಿಗಳು ಸಹ ಎಕ್ಸೈಟ್ ಆಗಿದ್ದಾರೆ..
ಪ್ರಾಜೆಕ್ಟ್ ಕೆ ಸಿನಿಮಾದ ಶೂಟಿಂಗ್ನಲ್ಲಿ ಅಮಿತಾಬ್ ಬಚ್ಚನ್ ಭಾಗಿ ಆಗಿದ್ದಾರೆ. ಪ್ರಭಾಸ್ ಮತ್ತು ಅಮಿತಾಬ್ ಕಾಂಬಿನೇಷನ್ನ ಈ ಸಿನಿಮಾದ ಮೊದಲ ದಿನದ ಶೂಟಿಂಗ್ ಮುಗಿದೆ. ಶೂಟಿಂಗ್ ಮುಗಿದ ಬಳಿಕ ಪ್ರಭಾಸ್ ತಮ್ಮ INSTAGRAM ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅಮಿತಾಬ್ ಅವರ ಫೋಟೋ ಹಂಚಿಕೊಂಡು ” ಇದು ನನ್ನ ಪಾಲಿಗೆ ಕನಸು, ನನಸಾದಂತೆ. ಮೇರು ನಟ ಅಮಿತಾಬ್ ಬಚ್ಚನ್ ಸರ್ ಜೊತೆಗೆ ಮೊದಲ ದಿನದ ಶೂಟಿಂಗ್ ಮುಗಿಸಿದ್ದೇನೆ.” ಎಂದು ಬರೆದುಕೊಂಡಿದ್ದಾರೆ.