Puneeth Rajkumar : ಅಪ್ಪು ಭಾವಚಿತ್ರ ಹಿಡಿದು ಶ್ರೀಶೈಲಗೆ ಮಾಲಧಾರಿಗಳ ಪಾದಯಾತ್ರೆ
ಕಲಬುರ್ಗಿ : ಅಪ್ಪು ಭಾವಚಿತ್ರ ಹಿಡಿದು ಶ್ರೀಶೈಲಗೆ ಮಾಲಧಾರಿಗಳ ಪಾದಯಾತ್ರೆ ಮಾಡಿದ್ದಾರೆ.
ಸೇಡಂ ತಾಲೂಕಿನ ಹೀರನಪಲ್ಲಿ ಗ್ರಾಮದಿಂದ ಶ್ರೀಶೈಲಗೆ ಭಕ್ತರು ಹೊರಟಿದ್ದರು..
ಗ್ರಾಮಸ್ಥರು ಪ್ರತಿ ವರ್ಷ ಹಿರುಮುಡಿ ಹೊತ್ತು ಹೋಗುವರು ..
ಈ ಸಲ ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಅವರ ಭಾವಚಿತ್ರ ಹಿಡಿದು ಶ್ರೀಶೈಲಗೆ ಪಾದಯಾತ್ರೆ ಹೊರಟಿದ್ದು ಕಂಡುಬಂತು
. 29 ಜನ ಭಕ್ತರು ಇರುಮುಡಿ ಹೊತ್ತು ಶ್ರೀಶೈಲಗೆ ಪಾದಯಾತ್ರೆ ಕೈಗೊಂಡಿದ್ದಾರೆ..
ಅಂದ್ಹಾಗೆ ಇದೇನು ಮೊದಲ ಬಾರಿಯಲ್ಲ…
ಈ ಹಿಂದೆ ಅನೇಕ ಮಾಲಾಧಾರಿಗಳು ಶಬರಿ ಮಲೆಗೆ ಅಪ್ಪು ಅವರ ಭಾವಚಿತ್ರ ಕೊಂಡೊಯ್ದಿರುವುದು ಕಂಡುಬಂದಿದೆ…
ಇನ್ನೂ ಅಪ್ಪು ಅವರ ಅಭಿಮಾನಿಗಳು ನಾನಾ ರೀತಿಗಳಲ್ಲಿ ಅಪ್ಪು ಅವರಿಗೆ ಗೌರವ ಸೂಚಿಸಿದ್ದಾರೆ…