‘83’ ಬಾಕ್ಸ್ ಆಫೀಸ್ ಸೋಲಿಗೆ ಇದೇ ಕಾರಣವಂತೆ …? ದೀಪಿಕಾ ಹೇಳಿದ್ದೇನು..??
ದೀಪಿಕಾ ಪಡುಕೋಣೆ ನಡನೆಯ ಗೆಹರಾಯಿಯಾ ಸಿನಿಮಾ ಕೂಡ ಫ್ಲಾಪ್ ಎನ್ನಲಾಗ್ತಿದೆ… ಸಿನಿಮಾ ಅಮೇಜನ್ ನಲ್ಲಿ ಸ್ಟ್ರೀಮ್ ಆಗ್ತಿದ್ದು,,, ಬಹಳ ನೆಗೆಟಿವ್ ರಿವೀವ್ ಗಳನ್ನೇ ಪಡೆದುಕೊಂಡಿದೆ..
ಇತ್ತೀಚೆಗೆ ದೀಪಿಕಾ ‘83’ ಸಿನಿಮಾದ ನಿರಾಸೆಯ ಬಗ್ಗೆ ರಾಷ್ಟ್ರೀಯ ವಾಹಿನಿಯ ಜೊತೆಗೆ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದಾರೆ.. ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆಯ ಸ್ವಲ್ಪ ಸಮಯದ ಮುಂಚೆ 83 ಸಿನಿಮಾ ಬಿಡುಗಡೆಯಾಯಿತು.. ಹೀಗಾಗಿ ಬಾಕ್ಸ್ ಆಫೀಸ್ ನಲ್ಲಿ ಸೀಮಿತ ಯಶಸ್ಸು ಕಂಡಿದೆ. ಆದ್ರೆ ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ..
ಅಲ್ಲದೇ ಈ ಸಿನಿಮಾ ಭಾರತದ ಐತಿಹಾಸಿಕ ಗೆಲುವು , ಕ್ಷಣವನ್ನ ನೆನಪಿಸುವ ಸಿನಿಮಾ.. ಈ ಸಿನಿಮಾ ಭಾರತೀಯರ ಪಾಲಿಗೆ ತುಂಬಾ ವಿಶೇಷ ಎಂದಿದ್ದಾರೆ.. ಮತ್ತೊಂದ್ ಕಡೆ ದೀಪಿಕಾ ಪಡುಕೋಣೆ ಅವರು 83 ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಕಾಣದಕ್ಕೆ ನೀಡಿರುವ ಕಾರಣವನ್ನ ನೆಟ್ಟಿಗರು ವಿರೋಧಿಸಿದ್ದು , ಪುಷ್ಪ ಸಿನಿಮಾ ಸಹ ಪ್ಯಾಂಡೆಮಿಕ್ ಸಂದರ್ಭದಲ್ಲಿಯೇ ಬಂದಿದ್ದು,,, ಆದ್ರೂ ಅದ್ಯಾಕೆ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಿತು ಎಂದು ಪ್ರಶ್ನೆಗಳನ್ನ ಕೇಳ್ತಿದ್ದಾರೆ..