ಗಂಗೂಭಾಯಿ ಕಾಠೆಯಾವಾಡಿ ಸಿನಿಮಾದ ಬಗ್ಗೆ ಇದೀಗ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದು ಆಲಿಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಈ ಪಾತ್ರಕ್ಕೆ ಆಲಿಯಾ ಸ್ಯೂಟಾಗಲ್ಲ… ಕಾಸ್ಟಿಂಗ್ ಆಯ್ಕೆ ಸರಿಯಿಲ್ಲ ಎಂದು ಕೆಂಡ ಕಾರಿದ್ದು , ಬಾಲಿವುಡ್ ಮಾಫಿಯಾ ಬಗ್ಗೆ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ..
ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿಬಂದಿದೆ.. ಈ ಸಿನಿಮಾ ತನ್ನ ಸ್ಟೋರಿ ಲೈನ್ , ಟೈಟಲ್ ವಿಚಾರಕ್ಕೆ ಆರಂಭದಿಂದಲೂ ವಿವಾದಗಳನ್ನ ಬೆನ್ನಿಗೆ ಸುತ್ತಿಸಿಕೊಂಡಿದೆ. ಇದೀಗ ಆಲಿಯಾ ವಿರುದ್ಧ ಮುಗಿಬಿದ್ದಿರುವ ಕಂಗನಾ ‘ ಪಾಪಾ ಕಾ ಪರಿ’ ( Dads Angel) ,’ರೋಮ್ಕಾಮ್ ಬಿಂಬೋ’ ಎಂದು ಕರೆದಿದ್ದಾರೆ… ಅಂದ್ಹಾಗೆ ಇನ್ನೂ 4 ದಿನಗಳ ನಂತರ ಗಂಗೂಭಾಯಿ ಕಾಥೇಯವಾಡಿ ರಿಲೀಸ್ ಆಗಲಿದ್ದು , ಆಗಿನಿಂದಲೇ ಅಭಿಮಾನಿಗಳು ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಾಂಬ್ ಸ್ಫೋಟಿಸಲಿದೆ ಎಂದು ಮಾತನಾಡ್ತಿದ್ದಾರೆ.
ಆದ್ರೆ ಈ ಸುದ್ದಿಗೆ ಸಿಟ್ಟುಕೊಂಡಿರುವ ಕಂಗನಾ ತಮ್ಮ Instagram ನಲ್ಲಿ ಈ ಶುಕ್ರವಾರ 200 ಕೋಟಿ ರೂ. ಬಾಕ್ಸ್ ಆಫೀಸ್ನಲ್ಲಿ ಸುಟ್ಟು ಬೂದಿಯಾಗಲಿದೆ. ಅದಕ್ಕೆ ಈ ಸಿನಿಮಾದ ದೊಡ್ಡ ನ್ಯೂನತೆಯೆಂದರೆ ಪಾತ್ರಕ್ಕೆ ಸರಿಯಾದ ಕಾಸ್ಟಿಂಗ್ ಮಾಡದಿರುವುದು. ಈ ಜನರು ಎಂದೂ ಬದಲಾಗುವುದಿಲ್ಲ. ದಕ್ಷಿಣ ಮತ್ತು ಹಾಲಿವುಡ್ ಚಿತ್ರರಂಗದಲ್ಲಿಯೂ ಈ ಸಿನಿಮಾ ತೆರೆಕಾಣಿಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಆಶ್ಚರ್ಯವಿಲ್ಲ. ಬಾಲಿವುಡ್ ಸಿನಿಮಾ ಮಾಫಿಯಾ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಲಿವುಡ್ ಮಾಫಿಯಾ ಡ್ಯಾಡಿ ಪಾಪಾ ಜೋ ( Karan Johar) ಅವರಿಂದ ಪ್ರಭಾವಿತರಾಗಿದ್ದಾರೆ. ಬನ್ಸಾಲಿ ಅವರನ್ನು ಭಾವನಾತ್ಮಕವಾಗಿ ಗುರಿ ಮಾಡಿ ಆಲಿಯಾ ಅವರನ್ನು ಅವರ ಸಿನಿಮಾದಲ್ಲಿ ನಟಿಸುವಂತೆ ಮಾಡಲಾಗಿದೆ. ಮೂವಿ ಮಾಫಿಯಾದ ಪ್ರಭಾವದಿಂದ ದೊಡ್ಡ ಸಿನಿಮಾಗಳ ನಿರ್ಮಾಪಕರು ಸಹ ತಮ್ಮ ಸಿನಿಮಾಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು. ಅಷ್ಟೇ ಅಲ್ದೇ ಬಾಲಿವುಡ್ ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ನನ್ನ ಬಾಲಿವುಡ್ ಮಾಫಿಯಾದ ಬಾಸ್ ಎಂದು ಕರೆಯೋ ಮೂಲಕ ಆಕ್ರೋಶ ಹೊರಹಾಕಿದ್ದಾರೆ.. ಜೊತೆಗೆ ಇಂಥವರನ್ನ ಪ್ರೋತ್ಸಾಹಿಸೋದನ್ನ ಬಿಡಿ ಎಂದು ಜನರಲ್ಲಿ ವಿನಂತಿಸಿಕೊಂಡಿದ್ದಾರೆ…