ಹರಿದ ಬಟ್ಟೆಯಲ್ಲಿ ತಾಳಿ ಕಟ್ಟಿದ್ದು ಯಾಕೆ ಮೆಗಾಸ್ಟಾರ್..!!
ಮೆಗಾಸ್ಟಾರ್ ಚಿರಂಜೀವಿ ಈಗ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಒಂದು ಕಾಲದಲ್ಲಿ ಜಸ್ಟ್ ಒಬ್ಬ ನಟ ಅಷ್ಟೆ ಆಗಿದ್ದರು. ಗಾಡ್ ಫಾದರ್ ಇಲ್ಲದೇ ಬಣ್ಣದ ಬದುಕಿಗೆ ಬಂದ ಚಿರಂಜೀವಿ ಈಗ ಸಾಕಷ್ಟು ನಟರಿಗೆ ಗಾಡ್ ಫಾದರ್, ಇನ್ಸ್ಪಿರೇಷನ್..!! ಸಾಮಾನ್ಯ ನಟರಾಗಿದ್ದ ಚಿರು ಸ್ವಯಂ ಕೃಷಿಯಿಂದ ಒಂದೊಂದೆ ಹೆಜ್ಜೆ ಹಿಡುತ್ತಾ ದೊಡ್ಡ ಚರಿತ್ರೆಯಲ್ಲೇ ಬರೆದಿದ್ದಾರೆ. 1987ರಲ್ಲಿ ಪುನಾದಿರಾಳ್ಲು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಚಿರು, ತಮ್ಮದೇಯಾದ ಅಮೋಘ ನಟನೆ, ಎಲೆಕ್ಟ್ರೀಫೈ ಡ್ಯಾನ್ಸ್, ಸ್ಟನ್ನಿಂಗ್ ಫೈಟ್ಸ್ ಗಳ ಮೂಲಕ ಕೋಟ್ಯಂತರ ಮಂದಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆರಿಯರ್ ನಲ್ಲಿ ಬೆಳೆಯುತ್ತಿರುವ ಹಂತದಲ್ಲಿಯೇ ಟಾಲಿವುಡ್ ನ ಪ್ರಮುಖ ಹಾಸ್ಯನಟ ಅಲ್ಲು ರಾಮಲಿಂಗಯ್ಯ ಪುತ್ರಿ ಸುರೇಖ ಅವರನ್ನ 1980 ಫೆಬ್ರವರಿ 20 ವರಿಸಿದ್ರು.
ಆದ್ರೆ ಆಗಿನ್ನೂ ಸಣ್ಣ ನಟರಾಗಿದ್ದ ಕನಿಷ್ಠ ಆಂಧ್ರ ಮಂದಿ ಚಿರು ಹೆಸರು ಕೂಡ ಸರಿಯಾಗಿ ಗೊತ್ತಿರದ ಕಾಲದಲ್ಲಿ ಟಾಲಿವುಡ್ ನ ದಿಗ್ಗಜ ನಟ ಅಲ್ಲು ರಾಮಲಿಂಗಯ್ಯ ಅವರು, ತಮ್ಮ ಪುತ್ರಿಯನ್ನ ಚಿರುಗೆ ಕೊಟ್ಟು ಮದುವೆ ಮಾಡಿದ್ದು ಸಾಕಷ್ಟು ಪ್ರಶ್ನೆಗಳನ್ನ ಹುಟ್ಟಿಹಾಕಿತ್ತು. ಆದ್ರೆ ಈ ಪ್ರಶ್ನೆಗಳಿಗೆ ತಲೆ ಕೊಡದೇ ಅಲ್ಲು ರಾಮಲಿಂಗಯ್ಯ ಅವರು, ಚಿರಂಜೀವಿ ಯಾವತ್ತಿದ್ದರೂ ದೊಡ್ಡ ಸ್ಟಾರ್ ಆಗುತ್ತಾರೆ ಎಂದು ನಂಬಿ ಪುತ್ರಿಯನ್ನ ಕೊಟ್ಟು ಮದುವೆ ಮಾಡಿದ್ದರು.
ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡುತ್ತಾ ಮೆಗಾಸ್ಟಾರ್ ಹಲವಾರು ಆಸಕ್ತಿಕರ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ. ನನ್ನ ಮದ್ವೆ ಸಂದರ್ಭದಲ್ಲಿ ನಾನು ಪೆಳ್ಳಿ ಸಮಯಾನಿಕಿ ತಾತಯ್ಯ ಪ್ರೇಮ ಲೀಲಲು ಸಿನಿಮಾ ಮಾಡುತ್ತಿದ್ದೆ. ಅದರಲ್ಲಿ ನನಗೆ ಮತ್ತು ನೂನತ ಪ್ರಸಾದ್ ಗೆ ಕೆಲ ನಿರ್ಣಾಯಕ ಸೀನ್ ಗಳಿದ್ದವು. ಆಗ ಅವರು ತುಂಬಾ ಬಿಜಿ ಇದ್ದ ನಟರಾಗಿದ್ದರು. ಅವರ ಡೇಟ್ಸ್ ಗಾಗಿ ಮದ್ವೆಯನ್ನು ಪೋಸ್ಟ್ ಪೋನ್ ಮಾಡಬೇಕಾಗುತ್ತೆ ಅಂದುಕೊಂಡಿದ್ದೆ.
ಆದ್ರೆ ನಿರ್ಮಾಪಕರು ಶೂಟಿಂಗ್ ಅನ್ನು ಮುಂದೂಡಿ ನನ್ನ ಮದ್ವೆಗೆ ಅವಕಾಶ ಮಾಡಿಕೊಟ್ಟರು. ಇನ್ನು ಮದುವೆಯ ಮಂಟಪದಲ್ಲಿ ಕುಳಿತುಕೊಳ್ಳುವಾಗ ನನ್ನ ಶರ್ಟ್ ಹರಿದಿತ್ತು. ಅದನ್ನ ನೋಡಿದ ಸುರೇಖಾ ಹೋಗಿ ಬಟ್ಟೆ ಬದಲಾಯಿಸಬಹುದಲ್ಲವಾ ಅಂತ ಕೇಳಿದ್ರು. ಆಗ ನಾನು ಬಟ್ಟೆ ಹರಿದ್ರೆ ಏನು, ತಾಳಿ ಕಟ್ಟೋಕೆ ಆಗಲ್ವಾ ಅಂತಾ ತಾಳಿಕಟ್ಟಿದೆ ಎಂದು ಅಂದಿನ ನೆನಪುಗಳನ್ನು ಚಿರು ಮೆಲುಕು ಹಾಕಿಕೊಂಡಿದ್ದಾರೆ.
megastar chiranjeevi surekha wedding story