Pushpa : ಯಕ್ಷಗಾನಕ್ಕೂ ಕಾಲಿಟ್ಟ ‘ಶ್ರೀವಲ್ಲಿ’
ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಪುಷ್ಪಾ ಸಿನಿಮಾದ ಶ್ರೀವಲ್ಲಿಯದ್ದೇ ಹವಾ… ಯಾರು ನೋಡಿದ್ರು ,,, ಶ್ರೀವಲ್ಲಿಗೆ ಸ್ಟೆಪ್ಸ್ ಹಾಕಿ ವಿಡಿಯೋ ಮಾಡ್ತಾ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡ್ತಿದ್ದಾರೆ… ಸೆಡಲೆಬ್ರಿಟಿಗಳು ಕ್ರಿಕೆಟಿಗರು , ಸೋಷಿಯಲ್ ಮೀಡಿಯಾ ಸ್ಟಾರ್ ಗಳು , ಮಕ್ಕಳಲ್ಲೂ ಸದ್ಯ ಶ್ರೀವಲ್ಲಿ ಕ್ರೇಜ್ ಇದೆ… ಆದ್ರೀಗ ಶ್ರೀವಲ್ಲಿ ಯಕ್ಷಗಾನ ಲೋಕಕ್ಕೂ ಕಾಲಿಟ್ಟಿದ್ದು ,,,, ಎಲ್ಲರೂ ಹುಬ್ಬೇರಿಸಿದ್ದಾರೆ… ಹೌದು ಕರಾವಳಿಯಲ್ಲಿ ಯಕ್ಷಗಾನ ಸಖತ್ ಫೇಮಸ್… ಯಕ್ಷಗಾನಕ್ಕೆ ಒಂದು ಮಹತ್ವ ಇದೆ.. ಅದರದ್ದೇ ಆದ ಗತ್ತಿದೆ…
ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲೂ ಸಹ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಟ್ರೆಂಡಿಂಗ್ , ವೈರಲ್ ವಿಚಾರಗಳನ್ನ ಯಕ್ಷಗಾನ ಪ್ರಸಂಗದ ಹಾಸ್ಯ ಸನ್ನಿವೇಷಗಳಲ್ಲಿ ಹಾಸ್ಯ ಕಲಾವಿದರು ಅಳವಡಿಸಿಕೊಂಡು ಪ್ರೇಕ್ಷಕರನ್ನ ನಗೆಯ ಅಲೆಯಲ್ಲಿ ತೇಲಾಡುಸುತ್ತಿದ್ದಾರೆ.. ಅದಕ್ಕೆ ಇದೀಗ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡು ಸಹ ಸೇರ್ಪಡೆಯಾಗಿದೆ… ಯಕ್ಷಗಾನ ವೇಳೆ ಶ್ರೀವಲ್ಲಿ ಹಾಡಿಗೆ ಥೇಟ್ ಅಲ್ಲು ಅರ್ಜುನ್ ರಂತೆಯೇ ನೃತ್ಯ ಮಾಡಿರುವ ಯಕ್ಷಗಾನ ಕಲಾವಿದರು ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದಾರೆ..
ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..