ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಸ್ಟೆಪ್ಸ್ ಹಾಕಿದ್ದ ಸಾಮಿ… ಅರೇ ಸಾಮಿ ಹಾಡು, ಬೀಟ್ಸ್ ಜೊತೆಗೆ ಮ್ಯೂಸಿಕ್ , ಲಿರಿಕ್ಸ್ ಸ್ಟೆಪ್ಸ್ ನಿಂದ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.. ಇದೀಗ ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ಸಾಮಿ ಸಾಮಿಗೆ ರಾಖೀ ಸ್ಟೈಲ್ ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.. ರಾಖಿ ಡ್ಯಾನ್ಸ್ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ…
ಬಾಲಿವುಡ್ ನ ನೌಟಂಕಿ ರಾಣಿ ರಾಖಿ ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲೇ ಇರುತ್ತಾರೆ.. ಕೆಲ ದಿನಗಳ ಹಿಂದಷ್ಟೇ ಬಿಗ್ ಬಾಸ್ ನನ್ನ ಯೂಸ್ ಮಾಡಿಕೊಳ್ತಾರೆ ,,, ಎಂಟರ್ ಟೈನ್ ಮೆಂಟ್ ಮುಗಿದ ಮೇಲೆ ಎಲಿಮಿನೇಟ್ ಮಾಡ್ತಾರೆ..
https://www.instagram.com/reel/CaLAleJhbWa/?utm_source=ig_web_copy_link
ನಿಜವಾಗಲೂ ಟ್ರೋಫಿಗೆ ನಾನು ಅರ್ಹಳು ಎಂದು ಕಣ್ಣೀರಿಟ್ಟಿದ್ದರು.. ನಂತರ ಬಿಗ್ ಬಾಸ್ ಸೀಸನ್ 15 ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಚಿತ್ರ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ರು.. ಅಲ್ಲದೇ ಉದ್ಯಮಿ ರಿತೇಶ್ ಎಂಬಾತನ ಜೊತೆಗೆ ಮದುವೆಯಾಗಿ ಎಂದು ಆತನನ್ನ ಪರಿಚಯವೂ ಮಾಡಿಸಿದ್ದರು.. ಅಲ್ಲದೇ ಪತಿ ಜೊತೆಗೆ ಪಬ್ಲಿಕಲಿ ಮಾಧ್ಯಮದವರ ಮುಂದೆಯೇ ಮುತ್ತಿಟ್ಟಿದ್ದರು..
ಅದಾದ 2 -3 ದಿನಗಳ ಅಂತರದಲ್ಲೇ ಬ್ರೇಕ್ ಅಪ್ ಅಂತ ಕಣ್ಣೀರಿಟ್ಟಿದ್ದರು.. ಈಗ ನೋಡಿದ್ರೆ ತಮ್ಮ ಫ್ರೆಂಡ್ ಜೊತೆಗೆ ಸಾಮಿ ಸಾಮಿ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿ , ಜಾಲಿ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಬಾಲಿವುಡ್ ನ ದುಬಾರಿ ಸಿನಿಮಾಗಳ ಐಟಂ ಹಾಡುಗಳಿಗೆ ರಾಖಿ ಹೆಜ್ಜೆ ಹಾಕ್ತಿದ್ದರು.. ಆದ್ರೆ ಅವರ ನೌಟಂಕಿಗಳು , ಕಾಂಟ್ರವರ್ಸಿಗಳಿಂದ ಈಗ ಸಿನಿಮಾರಂಗದಲ್ಲಿ ಚಾನ್ಸ್ ಗಳನ್ನ ಕಳೆದುಕೊಂಡಿದ್ದಾರೆ..