Rashmika | ರಷ್ಮಿಕಾ ಮಂದಣ್ಣ ಸಂಪಾದನೆ ಎಷ್ಟು..?
ಮಾಡೆಲ್ ಆಗಿ ಕೆರಿಯರ್ ಆರಂಭಿಸಿದ ರಷ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಆ ಬಳಿಕ ಟಾಲಿವುಡ್ ಗೆ ಹಾರಿ ಛಲೋ.. ಗೀತಾಗೋವಿಂದಂ, ಸರಿಲೇರು ನೀಕೆವ್ವರು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಇದಾದ ಬಳಿಕ ಅಲ್ಲು ಅರ್ಜುನ್ ನಟನೆಯ ಪುಷ್ಟ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ಯಾನ್ ಇಂಡಿಯಾ ಮಾರ್ಕೆಟ್ ಸಂಪಾದಿಸಿದ್ದಾರೆ. ಇತ್ತೀಚೆಗೆ ಬಿಗ್ ಬಿ ಜೊತೆಗೂ ಸ್ಕ್ರೀನ್ ಶೇರ್ ಮಾಡೋ ಅವಕಾಶವನ್ನ ರಷ್ಮಿಕಾ ಪಡೆದುಕೊಂಡಿದ್ದಾಳೆ.
ಇದರ ಜೊತೆಗೆ ಕ್ಯೂಟ್ ಎಕ್ಸ್ ಪ್ರೇಷನ್ಸ್, ಗ್ಲಾಮರ್ ನಿಂದಾಗಿ ನ್ಯಾಷನಲ್ ಕ್ರಶ್ ಎನಿಸಿಕೊಂಡ ರಷ್ಮಿಕಾ, ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಪಡೆದುಕೊಂಡಿದ್ದಾರೆ. ಚಿತ್ರರಂಗದಲ್ಲಿ ರಷ್ಮಿಕಾ ಸಕ್ಸಸ್ ಗ್ರಾಫ್ ಬೆಳೆಯುತ್ತಲೇ ಇದೆ. ಇದು ಹೀಗಿದ್ದರೇ ಈವರೆಗೆ ರಷ್ಮಿಕಾ ಸಂಪಾದಿಸಿ ಆಸ್ತಿಗಳೆಷ್ಟು..? ತೆಗೆದುಕೊಳ್ಳುತ್ತಿರುವ ಸಂಭಾವಣೆ ಎಷ್ಟು ಅಂತಾ ಅಭಿಮಾನಿಗಳು ಗೂಗಲ್ ನಲ್ಲಿ ಸರ್ಚ್ ಮಾಡಲು ಶುರು ಮಾಡಿಕೊಂಡಿದ್ದಾರೆ.
ಅಂದಹಾಗೆ ರಷ್ಮಿಕಾ ಮಂದಣ್ಣ ಪ್ರಸ್ತುತ ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಒಂದು ಜಾಹೀರಾತಿಗೆ ಲಕ್ಷಗಳಿಂದ ಹಿಡಿದು ಕೋಟಿ ರುಪಾಯಿಯವರೆಗೂ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಹೀಗೆ ಈವರೆಗೂ ರಷ್ಮಿಕಾ ಸಂಪಾದಿಸಿ ನಿಖರ ಆಸ್ತಿಯ ಬೆಲೆ ಸುಮಾರು 37 ಕೋಟಿ ರೂಪಾಯಿಗಳು. ಇನ್ನು ಒಂದು ವರ್ಷಕ್ಕೆ 21 ಕೋಟಿ 65 ಲಕ್ಷ ರೂಪಾಪಿಗಳನ್ನು ಸಂಪಾದಿಸುತ್ತಿದ್ದಾರೆ. ಇದಲ್ಲದೇ ಇತ್ತೀಚೆಗೆ ರಷ್ಮಿಕಾ ಕೊಂಡುಕೊಂಡ ರೇಂಜ್ ರೋವರ್ ಬ್ಲಾಕ್ ಲಗ್ಜರಿ ಕಾರಿನ ಬೆಲೆ ಕೋಟಿ ದಾಟಿರಬಹುದು ಎಂದು ಹೇಳಲಾಗುತ್ತಿದೆ.
1996 ಏಪ್ರಿಲ್ ನಲ್ಲಿ ಹುಟ್ಟಿದ ರಷ್ಮಿಕಾ ವಯಸ್ಸು ಪ್ರಸ್ತುತ 25 ವರ್ಷ. ಅತಿ ಕಡಿಮೆ ಕಾಲದಲ್ಲಿಯೇ ನಟಿಯಾಗಿ ರಷ್ಮಿಕಾ ಇಷ್ಟೊಂದು ಸಂಪಾದಿಸುತ್ತಿದ್ದಾರಾ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ರಷ್ಮಿಕಾ ಪ್ರಸ್ತುತ ಪುಷ್ಪ 2 ಸಿನಿಮಾದ ಶೂಟಿಂಗ್ ನಲ್ಲಿ ಬುಸಿ ಇದ್ದಾರೆ.
rashmika-mandanna-net-worth of year Rashmika Mandanna Net Worth, Biography, bf, Age, Height, Weight, Income and many more details can