ಶಾಕುಂತಲಂ ಫಸ್ಟ್ ಪೋಸ್ಟರ್, ಸಮಂತಾ ಲುಕ್ ಗೆ ಅಭಿಮಾನಿಗಳು ಫಿದಾ…
ಸಮಂತಾ ರುತು ಪ್ರಭು ಅಭಿನಯದ ಶಾಕುಂತಲಂ ತೆಲುಗು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ಮೂಡಿಬಂದಿದೆ. ಕಾಡಿನ ಆಶ್ರಮದ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳ ಜೊತೆ ಶ್ವೇತ ವಸ್ತ್ರಧಾರಿಯಾಗಿ ಕಾಣಿಸಿಕೊಂಡಿರುವ ಸಮಂತಾ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶಕುಂತಲಂ ಚಲನಚಿತ್ರ ಈ ಪೌರಾಣಿಕ ಕಥೆ ಆಧರಿಸಿದ ಚಿತ್ರವಾಗಿದೆ. ಇದು ಶಕುಂತಲಾ ಮತ್ತು ದುಷ್ಯಂತ ನಡುವಿನ ಮಹಾಕಾವ್ಯದ ಪ್ರೇಮಕಥೆಯನ್ನು ತಿಳಿಸುತ್ತದೆ. ಇದು ಮಹಾಭಾರತದ ಆದಿ ಪರ್ವದ ರೂಪಾಂತರವಾಗಿದೆ.
ರಾಣಿ ಶಕುಂತಲಾ ದೇವಿ ಪಾತ್ರದಲ್ಲಿ ಸಮಂತಾ ನಟಿಸಿರುವ ಈ ಚಿತ್ರವನ್ನು ಗುಣಶೇಖರ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಗುಣಶೇಕರ್ ಈ ಹಿಂದೆ ಅನುಷ್ಕಾ ಶೆಟ್ಟಿಗೆ ರುದ್ರಮ್ಮದೇವಿ ಚಿತ್ರವನ್ನ ನಿರ್ದೇಶಿಸಿದ್ದರು. ಉಳಿದ ಪಾತ್ರಗಳಲ್ಲಿ ರಾಜ ದುಷ್ಯಂತನಾಗಿ ದೇವ್ ಮೋಹನ್ ನಟಿಸಿದ್ದಾರೆ. ಅಲ್ಲು ಅರ್ಜುನ್ನ ಮಗಳು ಕೂಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾಳೆ. ರಾಜಕುಮಾರ ಭರತನಾಗಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ.
ನಟಿ ಸಮಂತಾ ಈಗಾಗಲೇ ಪೌರಾಣಿಕ ಚಿತ್ರದ ಕುರಿತು ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ. ಹೊಸ ಪೋಸ್ಟರ್ ಚಿತ್ರದ ಕುರಿತು ಕುತೂಹಲಗೊಳಿಸುವಂತೆ ಮಾಡುತ್ತದೆ. ರಾಣಿ ಶಕುಂತಲಾ ಮತ್ತು ರಾಜ ದುಷ್ಯಂತನ ನಡುವಿನ ಪ್ರೇಮ ಕಥೆಯ ಬಗ್ಗೆ ತಿಳಿದಿಲ್ಲದವರು, ಭಾರತೀಯ ಕಥೆಗಳಲ್ಲಿ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪ್ರೇಮ ಕಥೆಯನ್ನ ತಿಳಿಯಬಹುದು.
ನೀಲಿಮಾ ಗುಣ ಮತ್ತು ದಿಲ್ ರಾಜು ಅವರು ಗುಣ ಟೀಮ್ವರ್ಕ್ಸ್ ಮತ್ತು ದಿಲ್ ರಾಜು ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. Shakuntalam: Samantha Ruth Prabhu is ethereal as the divine beauty in first look poster.