ಪ್ರಭಾಸ್ ರಾಧೆ ಶ್ಯಾಮ್ ಚಿತ್ರಕ್ಕೆ ಅಮಿತಾಬ್ ಧ್ವನಿ ನಿರೂಪಣೆ….
ಪ್ಯಾನ್ ಇಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ರಾಧೇ ಶಾಮ್ ಚಿತ್ರವನ್ನ ನೋಡಲು ಅಭಿಮಾನಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಚಿತ್ರದ ಪೊಸ್ಟರ್ ಟೀಸರ್ ಟ್ರೇಲರ್ ಹಾಡು ಎಲ್ಲವೂ ಸೂಪರ್ ಹಿಟ್ ಆಗಿವೆ. ಸೋಶಿಯಲ್ ಮೀಡಿಯಾಗಳಲ್ಲೂ ಈ ಚಿತ್ರದ ಕುರಿತು ಚರ್ಚೆಗಳು ಶುರು ಆಗಿವೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಈ ಸಿನಿಮಾ ಸಂಕ್ರಾಂತಿಯಂದು ತೆರೆಗೆ ಬರಬೇಕಿತ್ತು. ಆದರೆ ಕರೋನಾದ ಮೂರನೇ ಅಲೆ ಒಮಿಕ್ರಾನ್ ಕಾರಣದಿಂದಾಗಿ ಚಿತ್ರದ ಬಿಡುಗಡೆಯನ್ನ ಮುಂದೂಡಲಾಯಿತು. ಈ ಸಮಯದ ಲಾಭ ಪಡೆಯಲು ಮುಂದಾಗಿರುವ ಚಿತ್ರತಂಡ ಹೊಸತನವನ್ನ ಸೇರಿಸಲು ಮುಂದಾಗಿದೆ. ಹೊಸ ವಿಷಯದ ಪ್ರಕಾರ ರಾಧೆ ಶ್ಯಾಮ್ ಚಿತ್ರತಂಡವನ್ನ ಅಮಿತಾಬ್ ಬಚ್ಚನ್ ಸೇರಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಧ್ವನಿಗೆ ವಿಶೇಷ ತಾಕತ್ತಿದೆ . ಅವರ ಧ್ವನಿಯನ್ನ ಬಳಸಿಕೊಳ್ಳಲು ಹಲವು ಚಿತ್ರ ನಿರ್ದೇಶಕರು ನಿರ್ಮಾಪಕರು ಆಸೆ ಪಡುತ್ತಾರೆ. ಅಂತಹ ಒಂದು ಅವಕಾಶ ರಾಧೇ ಶ್ಯಾಮ್ ಚಿತ್ರಕ್ಕೆ ಸಿಕ್ಕಿದೆ. ಪ್ರಭಾಸ್ ಸಿನಿಮಾಗೆ ಬೀಗ್ ಬಿ ನಿರೂಪಣೆ ಮಾಡಿದ್ದಾರೆ. ” 1970ರ ಕಾಲ ಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತೆ. ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಅಂದಾಗ, ಇಡೀ ದೇಶವೇ ಮೆಚ್ಚುವಂತಹ ಧ್ವನಿ ಬೇಕಿತ್ತು. ಅಮಿತಾಬ್ ಬಚ್ಚನ್ ಅವರಂತಹ ಧ್ವನಿ ಸೂಕ್ತವೆನಿಸಿತ್ತು. ಈ ಧ್ವನಿಯನ್ನು ಎಲ್ಲರೂ ಗುರುತಿಸುತ್ತಾರೆ. ಅಮಿತಾಬ್ ಬಚ್ಚನ್ ‘ರಾಧೆ ಶ್ಯಾಮ್’ ಸಿನಿಮಾ ನಿರೂಪಕರಾಗಿದ್ದಕ್ಕೆ ನಮಗೆ ಖುಷಿಯಾಗಿದೆ.” ಎಂದು ನಿರ್ದೇಶಕ ರಾಧ ಕೃಷ್ಣ ಕುಮಾರ್ ತಿಳಿಸಿದ್ದಾರೆ.
ರಾಧೇ ಶ್ಯಾಮ್ ಚಿತ್ರವನ್ನ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕ ಕಾಲಕ್ಕೆ ಚಿತ್ರೀಕರಿಸಿದ್ದಾರೆ, ಇದು ಎಲ್ಲಾ ಭಾಷೆಗಳಲ್ಲಿ ಇರಲಿದೆಯೋ ಅಥವಾ ಕೇವಲ ಹಿಂದಿ ಅವತರಣಿಕೆಯಲ್ಲಿ ಮಾತ್ರ ಇರಲಿದೆಯೋ ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಮಾರ್ಚ್ 11 ರಂದು ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಯಾಗಲಿದೆ. ಸಿಕ್ಕ ಸಮಯವನ್ನ ಉಪಯೋಗಿಸಿಕೊಂಡ ಚಿತ್ರತಂಡ ಒಂದಿಷ್ಟು ಬದಲಾವಣೆಯನ್ನ ಮಾಡಿಕೊಂಡು ತೆರೆಗೆ ಬರಲು ರೆಡಿಯಾಗಿದೆ. Amitabh Soundtrack for Prabhas Radhe Shyam.