Mahesh babu | ಕಲಾವತಿ ಹಾಡಿಗೆ ಕೀರ್ತಿ ಸುರೇಶ್ ಡ್ಯಾನ್ಸ್
ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ.. ಸಿನಿಮಾದ ಕಳಾವತಿ ಹಾಡು ಯುಟ್ಯೂಬ್ ನಲ್ಲಿ ದೂಳೆಬ್ಬಿಸುತ್ತಿದೆ.
ಪ್ರೇಮಿಗಳ ದಿನದ ಅಂಗವಾಗಿ ರಿಲೀಸ್ ಆದ ಕಳಾವತಿ ಸಾಂಗ್ ಈವರೆಗೂ 35 ಮಿಲಿಯನ್ ವ್ಯೂವ್ಸ್ ಪಡೆದುಕೊಂಡು ಮುನ್ನುಗ್ಗುತ್ತಿದೆ.
ಈ ಹಾಡಿಗೆ ಈಗಾಗಲೇ ಅನೇಕರು ರೀಲ್ಸ್ ಮಾಡಿದ್ದಾರೆ.
ಮಹೇಶ್ ಬಾಬು ಪುತ್ರಿ ಸಿತಾರಾ ಕೂಡ ಕಳಾವತಿ ಹಾಡಿನ ರೀಲ್ಸ್ ಮಾಡಿದ್ದರು.
ಇದೀಗ ಕೀರ್ತಿ ಸುರೇಶ್ ‘ಕಳಾವತಿ ಸಾಂಗ್’ಗೆ ರೀಲ್ಸ್ ಮಾಡಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ.
ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ಕೀರ್ತಿ ಸುರೇಶ್ ಜೋಡಿಯಾಗಿ ನಟಿಸುತ್ತಿದ್ದಾರೆ.
ಪರಶುರಾಮ್ ನಿರ್ದೇಶನದ ಈ ಚಿತ್ರವನ್ನು ಜಿಎಂಬಿ ಪ್ರೊಡಕ್ಷನ್ಸ್, ಮೈತ್ರಿ ಮೂವೀ ಮೇಕರ್ಸ್ ಮತ್ತು 14 ರೀಲ್ಸ್ ಸಹ-ನಿರ್ಮಾಣ ಮಾಡುತ್ತಿವೆ.
Keerthi Suresh Dance for Kalawati song