ಸ್ಟಾರ್ ನಟರ ನೆಗೆಟಿವ್ ಶೇಡ್ – ಇವರ ಮುಂದೆ ಹೀರೋಗಳು ಮಂಕು…
ಬಾಲಿವುಡ್ ಚಿತ್ರಗಳಲ್ಲಿ ನಾಯಕನ ಪಾತ್ರದಷ್ಟೇ ಪ್ರಾಮುಖ್ಯತೆ ಖಳನಾಯಕನ ಪಾತ್ರಕ್ಕೂ ಇರುತ್ತದೆ. ಈ ಹಿಂದೆ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹಲವು ನಟರು ಹಿಂಜರಿಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹಲವು ಸ್ಟಾರ್ ಗಳು ನೆಗೆಟೀವ್ ಶೇಡ್ ಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನೆಗೆಟೀವ್ ಪಾತ್ರದ ಮುಂದೆ ಹೀರೋಗಳೂ ಮಂಕಾಗುತ್ತಿದ್ದಾರೆ.
ಮುಂದಿನ ತಮ್ಮ ಚಿತ್ರಗಳಲ್ಲಿ ಭಯಾನಕ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಂತಹ ಸ್ಟಾರ್ ಗಳ ಬಗ್ಗೆ ನಾವು ತಿಳಿಸಿಕೊಂಡ್ತೀವಿ.
ಆಲಿಯಾ ಭಟ್
ಆಲಿಯಾ ಭಟ್ ಶೀಘ್ರದಲ್ಲೇ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಆಲಿಯಾ ಮೊದಲ ಬಾರಿಗೆ ಲೇಡಿ ಡಾನ್ ಪಾತ್ರವನ್ನು ಚಿತ್ರ ತೆರೆಯ ಮೇಲೆ ನಿರ್ವಹಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಆಲಿಯಾ ಭಟ್ ಅವರ ಡ್ಯಾಶಿಂಗ್ ಅವತಾರ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.
ಅಕ್ಷಯ್ ಕುಮಾರ್
‘ಬಚ್ಚನ್ ಪಾಂಡೆ’ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್ಗಳು ಅಕ್ಷಯ್ ಕುಮಾರ್ ಅವರ ಕೈಯಲ್ಲಿವೆ. ಬಚ್ಚನ್ ನಲ್ಲಿ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಲುಕ್ ಮತ್ತು ಪಾತ್ರ ಎರಡೂ ಅಪಾಯಕಾರಿಯಾಗಿರಲಿವೆ. ಇದರ ಝಲಕ್ ಚಿತ್ರದ ಟ್ರೇಲರ್ ನಲ್ಲಿ ತೋರಿಸಲಾಗಿದೆ.
ಸಂಜಯ್ ದತ್
‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಲುಕ್ ಕೂಡ ಬಹಳ ಹಿಂದೆಯೇ ಬಹಿರಂಗವಾಗಿದ್ದು, ಈ ಚಿತ್ರದಲ್ಲಿ ಸಂಜಯ್ ದತ್ ಭಯಾನಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ತಿಳಿಯುತ್ತದೆ.
ರಣಬೀರ್ ಕಪೂರ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅಭಿಮಾನಿಗಳ ಕಣ್ಣು ಕೂಡ ರಣಬೀರ್ ಅಭಿನಯದ ‘ಶಂಶೇರಾ’ ಚಿತ್ರದ ಮೇಲಿದೆ. ಶಂಶೇರಾ ಚಿತ್ರದಲ್ಲಿ ರಣಬೀರ್ ಡಕಾಯಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಖಳನಾಯಕನ ಪಾತ್ರ ಹೊಸದು.