ಎಸ್.ನಾರಾಯಣ್ ಗೆ ಘನಘೋರ ಅವಮಾನ
ನನ್ನ ಮನಸ್ಸು ಇವತ್ತು ತುಂಬಾ ಬೇಜಾರಲ್ಲಿದೆ. ಸಿಕ್ಕಾಪಟ್ಟೆಬೇಜರಾಗಿದೆ.. ಇದು ಕಲಾಸಾಮ್ರಾಟ್ ಎಸ್ ನಾರಾಯಣ್ ಅವರ ಮಾತು.
ಎಸ್.ನಾರಾಯಣ್ ಅವರಿಗೆ ಓಲ್ಡ್ ಮಂಕ್ ಸಿನಿಮಾ ತಂಡದಿಂದ ಅವಮಾನ ಆಗಿದೆಯಂತೆ. ನಾನು ಸತತ 30 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ.
ದೊಡ್ಡ ದೊಡ್ಡ ಕಲಾವಿದರು, ತಂತ್ರಜ್ಞರೊಟ್ಟಿಗೆ ಕೆಲಸ ಮಾಡಿದ್ದೇನೆ. ನಟ, ನಿರ್ಮಾಪಕ, ವಿತರಕ, ತಂತ್ರಜ್ಞ, ಸಂಯೋಜಕ ಇನ್ನೂ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ.
ಚಿತ್ರರಂಗ ಈ ವರೆಗೆ ನನ್ನ ಚೆನ್ನಾಗಿ ನೋಡಿಕೊಂಡಿದೆ. ಗೌರವಿಸಿದೆ”. ‘ಇದೀಗ ನಾನು ‘ಓಲ್ಡ್ ಮಾಂಕ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದೇನೆ.
ಆ ಸಿನಿಮಾಕ್ಕೆ ಶ್ರೀನಿ ನಾಯಕ ಹಾಗೂ ನಿರ್ದೇಶಕ. ಇವರೇ ಈ ಹಿಂದೆ ‘ಬೀರ್ ಬಲ್’ ಸಿನಿಮಾ ಮಾಡಿದ್ದರು.
ಈ ‘ಓಲ್ಡ್ ಮಾಂಕ್’ ತಂಡದಿಂದ ನನಗೆ ಅವಮಾನ ಆಗಿದೆ ಎಂದು ವಿಡಿಯೋ ಮಾಡಿ ಎಸ್ ನಾರಾಯಣ್ ಹೇಳಿಕೊಂಡಿದ್ದಾರೆ.
ಹೌದು..! ಸದ್ಯ ಎಸ್ ನಾರಾಯಣ್ ಅವರು ಓಲ್ಡ್ ಮಂಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಶ್ರೀನಿ ಅವರು ಎಸ್ ನಾರಾಯಣ್ ಅವರನ್ನ ಭೇಟಿಯಾಗಿ, ಒಂದು ಪಾತ್ರದ ಬಗ್ಗೆ ಚರ್ಚಿಸಿದ್ದರು.
ಪಾತ್ರ ಒಪ್ಪಿಗೆಯಾಗಿ ನಾರಾಯಣ್ ಅವರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಆದ್ರೆ ಈಗ ಎಸ್. ನಾರಾಯಣ್ ಅವರು ವಿಡಿಯೋ ರಿಲೀಸ್ ಮಾಡಿ ಬೇಸರ ಹೊರಹಾಕಿದ್ದಾರೆ.
ವಿಡಿಯೋದಲ್ಲಿ ನಾರಾಯಣ್ ಅವರು, ತಮಗೆ ಬೇಸರವಾಗಿರುವ ಬಗ್ಗೆ ಗಂಭೀರವಾಗಿ ಮಾತನಾಡುತ್ತಾ, ಕ್ಯಾಮೆರಾವನ್ನು ‘ಓಲ್ಡ್ ಮಾಂಕ್’ ಚಿತ್ರತಂಡದ ಕಡೆಗೆ ತಿರುಗಿಸಿ ಅವರೆಲ್ಲ ಕೇಕ್ ತಿನ್ನುತ್ತಿರುವ ದೃಶ್ಯಗಳನ್ನು ತೋರಿಸಿದ್ದಾರೆ.
”ನೋಡಿ ಇಷ್ಟು ದೊಡ್ಡ ಹಿರಿಯ ನಟ, ನಿರ್ದೇಶಕ ನಾನು ನನಗೆ ಒಂದು ಪೀಸ್ ಕೇಕ್ ಕೊಟ್ಟಿಲ್ಲ ಇವರು. ಆದರೆ ಇವರುಗಳು ಮಾತ್ರ ಕೇಜಿಗಟ್ಟಲೆ ಪೈನಾಪಲ್ ಕೇಕ್ ತರಿಸಿಕೊಂಡು ಮೆಕ್ಕುತ್ತಿದ್ದಾರೆ” ಎಂದು ಹಾಸ್ಯ ಮಾಡಿದ್ದಾರೆ.
old-monk-film team-insults-senior-director-s-narayan