#BheemlaNayak | ಭೀಮ್ಲಾ ನಾಯಕ್ ಸಿನಿಮಾದ ಟ್ರೇಲರ್ ರಿಲೀಸ್
ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ತೆಲುಗು ಸಿನಿಮಾ ಲವರ್ಸ್ ಜಾತಕ ಪಕ್ಷಗಳಂತೆ ಕಾಯುತ್ತಿರುವ ಭೀಮ್ಲಾ ನಾಯಕ್ ಇದೇ ಫೆಬ್ರವರಿ 25 ರಂದು ಥಿಯೇಟರ್ ಅಂಗಳಕ್ಕೆ ಬರಲಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ 8.10 ಗಂಟೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತದೆ ಅಂತಾ ಚಿತ್ರತಂಡ ಹೇಳಿತ್ತು.
ಆದ್ರೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾದ ಟ್ರೇಲರ್ 9.10 ಗಂಟೆಗೆ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ಟ್ರೈಲರ್ ನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಡೈಲಾಗ್ ಗಳು ಚಿಂದಿಯಾಗಿದೆ. ತಮನ್ ಮ್ಯೂಜಿಕ್ ಜೊತೆಗೆ ಪವನ್ ಕಲ್ಯಾಣ್, ರಾನಾ ಆಕ್ಟಿಂಗ್ ಸೂಪರ್ಬ್ ಎನ್ನುವಂತಿದೆ.
ಮುಖ್ಯವಾಗಿ ಸಿನಿಮಾದ ಟ್ರೇಲರ್ ಔಟ್ ಅಂಡ್ ಔಟ್ ಪವರ್ ಪ್ಯಾಕ್ಡ್ ಆಗಿದೆ.
ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯುಟ್ಯೂಬ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಸದ್ಯ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಮುಗ್ಗುತ್ತಿದೆ.
ಟ್ರೆಲರ್ ಗೆ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.
ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಮತ್ತು ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,
ಬಹುತಾರಾಗಣ ಸಿನಿಮಾಗೆ ಸಾಗರ್ ಕೆ ಚಂದ್ರು ನಿರ್ದೇಶನವಿದೆ. ಸ್ಟಾರ್ ನಿರ್ದೆಶಕ ತಿವಿಕ್ರಮ್ ಶ್ರೀನಿವಾಸ್ ಅವರ ಸಂಭಾಷಣೆ ಮತ್ತು ಚಿತ್ರಕಥೆಯನ್ನು ಹೊಂದಿದೆ.
ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ನಿತ್ಯಾ ಮೆನನ್ ಮತ್ತು ಸಂಯುಕ್ತಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
pawan-kalyan-bheemla-nayak-official-trailer-Release