ರಶ್ಮಿಕಾ ಜೊತೆ ಮದುವೆ ಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ..
ಸೌತ್ ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಡೇಟಿಂಗ್, ಗಾಸಿಪ್ ಸುದ್ದಿಗಳು ಮತ್ತೆ ಮತ್ತೆ ಹರಿದಾಡುತ್ತಿರುತ್ತದೆ. ಸಿನಿಮಾ ಬಿಟ್ಟು ಇಬ್ಬರೂ ಕೂಡ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಹಲವು ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ಇದೀಗ ಮದುವೆ ವಿಚಾರವಾಗಿ, ಮೌನ ಮುರಿದಿರುವ ವಿಜಯ್ ದೇವರಕೊಂಡ ತಮ್ಮ ಮತ್ತು ರಶ್ಮಿಕಾ ಮಂದಣ್ಣ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಬಹಳ ಆತ್ಮೀಯರು ಇಬ್ಬರು ಜೊತೆಯಾಗಿ ಹಲವು ಪ್ರವಾಸಗಳನ್ನ ಮಾಡಿದ್ದಾರೆ. ಒಟ್ಟೊಟ್ಟಿಗೆ ಸುತ್ತಾಡಿದ್ದಾರೆ. ರಶ್ಮಿಕಾ ಬಾರಿ ಸಂಕ್ರಾಂತಿ ಹಬ್ಬವನ್ನ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಆಚರಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಇವರ ಪ್ರೇಮದ ವಿಚಾರಗಳು ಹಲವು ಬಾರಿ ಹರಿದಾಡುತ್ತಿರುತ್ತವೆ.
ಈ ಎಲ್ಲಾ ಊಹಪೋಹಗಳನ್ನ ತಿರಸ್ಕರಿಸಿರುವ ವಿಜಯ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಮಾಮೂಲಿನಂತೆ ಇದು ಅಸಂಬದ್ಧ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಡೋಂಟ್ ವಿ ಲವ್ ದ ನ್ಯೂಸ್ ಎಂದು ಬರೆದುಕೊಂಡಿದ್ದಾರೆ. ಆದರೆ ಲವ್ ಪದದ ಬದಲು ಹಾರ್ಟ್ ಸಿಂಬಲ್ ಹಾಕಿ ಬರೆದಿರುವುದು ಧ್ವಂದ್ವಾರ್ಥ ಬರುವಂತೆ, ಮತ್ತು ಬೈದಿರುವಂತೆ ಕಾಣಿಸುತ್ತಿದೆ. ಈ ಟ್ವೀಟಿ ಈಗ ಸಾಕಷ್ಟು ವೈರಲ್ ಆಗುತ್ತಿದೆ.
2018 ತೆರೆಗೆ ಬಂದ ರೊಮ್ಯಾಂಟಿಕ್ ಕಾಮಿಡಿ ಗೀತಾ ಗೋವಿಂದಂ ಮತ್ತು 2019 ಬಿಡುಗಡೆಯಾದ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಡಿಯರ್ ಕಾಮ್ರೇಡ್ ಎರಡು ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರ ಮನಗೆದ್ದಿತ್ತು. ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದವು.
ವಿಜಯ್ ದೇವರ ಕೊಂಡ್ ಮುಂದಿನ ಸಿನಿಮಾ ಲೈಗರ್ ಪ್ರಮೋಷನ್ ಅಲ್ಲಿ ಬ್ಯೂಸಿಯಾಗಿದ್ದಾರೆ. ರಶ್ಮಿಕಾ, ತೆಲುಗು ಹಿಂದಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.