’ಆರಾಮ್ ಅರವಿಂದ್ ಸ್ವಾಮಿ’ ಜೊತೆಗೆ ಬರ್ತಿದ್ದಾರೆ ಕುಂದಾಪುರದ ಹುಡ್ಗ ಅಭಿಷೇಕ್ ಶೆಟ್ಟಿ
ಸಿನಿಮಾ ಲೋಕದಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಎಂಬ ಕನಸು ಅಳವಾಗಿ ಬೇರೂರಿತ್ತು. ಅದ್ರ ಮೊದಲ ಭಾಗವಾಗಿ ಒಂದಷ್ಟು ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಕುಂದಾಪುರದ ಪ್ರತಿಭೆ ಅಭಿಷೇಕ್ ಶೆಟ್ಟಿ ಇವತ್ತು ಕನ್ನಡ ಚಿತ್ರರಂಗದ ಭರವಸೆ ಯುವ ನಟ ಹಾಗೂ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಮ್ ಗಣಿ ಬಿಕಾಂ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನ್ಯಾಚುರಲ್ ಸ್ಟಾರ್ ಅಭಿಷೇಕ್ ಶೆಟ್ಟಿ ನಿರ್ದೇಶನದ ಜೊತೆಗೆ ನಟನೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಹಾಗೂ ಶ್ರೀಮಹದೇವ್ ನಟನೆಯ ಗಜಾನನ ಅಂಡ್ ಗ್ಯಾಂಗ್ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿರುವ ಅಭಿಷೇಕ್ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಾಳೆ ಅಭಿಷೇಕ್ ಹುಟ್ಟುಹಬ್ಬ. ಈ ಹಿನ್ನೆಲೆ ಹುಟ್ಟುಹಬ್ಬದ ಸ್ಪೆಷಲ್ ಆಗಿ ಅಭಿಷೇಕ್ ತಮ್ಮ ಮುಂದಿನ ನಿರ್ದೇಶನದ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇದೀಗ ಆರಾಮ್ ಅರವಿಂದ್ ಸ್ವಾಮಿ ಎನ್ನುವ ಸಿನಿಮಾಗೆ ತಾವೇ ಕಥೆ ಬರೆದು ಅಭಿಷೇಕ್ ನಿರ್ದೇಶನ ಮಾಡಲು ಸಜ್ಜಾಗಿದೆ. ಕಾಮಿಡಿ ಜೊತೆಗೆ ಎಮೋಷನ್ ಕಥಾಹಂದರ ಹೊಂದಿರುವ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ತಾರಾಬಳಗ, ಇತರ ತಾಂತ್ರಿಕ ಕಲಾವಿದರ ಬಗ್ಗೆ ಸದ್ಯದಲ್ಲಿಯೇ ಅಭಿಷೇಕ್ ಶೆಟ್ಟಿ ರಿವೀಲ್ ಮಾಡಲಿದ್ದಾರೆ.