IPL vs Cinemas | ಸಿನಿ ಸ್ಟಾರ್ ಗೆ ಕ್ರಿಕೆಟರ್ಸ್ ಭಯ..!
ಪ್ರತಿ ವರ್ಷ ಮಾರ್ಚ್ – ಏಪ್ರಿಲ್ ತಿಂಗಳುಗಳು ಬಂದರೆ ಭಾರತದಲ್ಲಿ ಎಂಟರ್ ಟೈನ್ಮೆಂಟ್ ಗೆ ಯಾವುದೇ ಕೊರತೆ ಇರೋದಿಲ್ಲ. ಯಾಕಂದ್ರೆ ಒಂದು ಕಡೆ ಬೇಸಿಗೆ ರಜೆ ಮತ್ತು ಹಬ್ಬಗಳನ್ನು ಗುರಿಯಾಗಿಸಿಕೊಂಡು ಆ ಭಾಷೆ ಈ ಭಾಷೆ ಅನ್ನೋ ವ್ಯತ್ಯಾಸ ಇಲ್ಲದೇ ದೊಡ್ಡ ದೊಡ್ಡ ಸ್ಟಾರ್ ನಟ ಸಿನಿಮಾಗಳು ರಿಲೀಸ್ ಆಗುತ್ತವೆ. ಬಿಗ್ ಬಜೆಟ್ ಸಿನಿಮಾಗಳು ಇದೇ ಸಮಯಕ್ಕಾಗಿ ಕಾಯುತ್ತಾ ರಜೆ ಮತ್ತು ಹಬ್ಬಗಳನ್ನ ಎನ್ ಕ್ಯಾಶ್ ಮಾಡಿಕೊಳ್ಳುತ್ತವೆ.
ಹೀಗೆ ರಿಲೀಸ್ ಆಗುವ ಸಿನಿಮಾಗಳಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ತಮ್ಮ ತಮ್ಮ ನೆಚ್ಚಿನ ನಟರ ಸಿನಿಮಾಗಳನ್ನ ನೋಡಲು ಅಭಿಮಾನಿಗಳು ಮುಗಿಬೀಳುತ್ತಾರೆ. ತಮ್ಮ ನೆಚ್ಚಿನ ನಟರ ಸಿನಿಮಾಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಾರೆ. ದೊಡ್ಡ ಸ್ಟಾರ್ ನಟ ಸಿನಿಮಾ ರಿಲೀಸ್ ಆಗಿದ್ರೆ ಅವತ್ತು ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಈ ಹಬ್ಬವನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ತಿಂಗಳುಗಳಿಂದಲೇ ಸಿದ್ಧತೆ ಮಾಡಿಕೊಂಡಿರುತ್ತಾರೆ. ಇದು ಸಿನಿಮಾ ಜಗತ್ತಿಗೆ ಪ್ಲಸ್ ಪಾಯಿಂಟ್ ..
ಆದ್ರೆ ಇದೇ ಸೀಸನ್ ನಲ್ಲಿ ಭಾರತದಲ್ಲಿ ಮತ್ತೊಂದು ಹಬ್ಬ ಶುರುವಾಗುತ್ತದೆ. ಆ ಹಬ್ಬ ವರ್ಷಕ್ಕೊಮ್ಮೆ ಬಂದರೂ, ಹಬ್ಬ ಮುಗಿಯುವವರೆಗೂ ಎಂಟರ್ ಟೈನ್ಮೆಂಟ್ ಗೆ ಯಾವುದೇ ಕೊರತೆ ಇರುವುದಿಲ್ಲ. ಆ ಹಬ್ಬ ಶುರುವಾದ್ರೆ ಪ್ರತಿದಿನ ಸಂಭ್ರಮವಿರುತ್ತೆ. ಅಭಿಮಾನಿಗಳು ಕೆಲಸ ಕಾರ್ಯಗಳನ್ನ ಬಿಟ್ಟು ಪ್ರತಿ ದಿನ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ, ಅದೇ ಇಂಡಿಯನ್ ಪ್ರಿಮಿಯರ್ ಲೀಗ್..!!
ಹೌದು..! ಭಾರತದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಗೆ ತಮ್ಮದೇ ಯಾದ ಫಾಲೋಯಿಂಗ್ ಇದೆ. ಕೋಟ್ಯಂತರ ಮಂದಿ ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ಸ್ನೇಹಿತರನ್ನೂ ಶತ್ರುಗಳನ್ನಾಗಿ ಮಾಡಿಕೊಂಡಿರುತ್ತಾರೆ. ನೆಚ್ಚಿನ ತಂಡದ ಪಂದ್ಯಕ್ಕಾಗಿ ಜಾಕತ ಪಕ್ಷಿಗಳಂತೆ ಕಾಯುತ್ತಿರುತ್ತಾರೆ.
ಆದ್ರೆ ಈ ಕಂಡೀಷನ್ ಸಿನಿಮಾ ವರ್ಸಸ್ ಕ್ರಿಕೆಟ್ ಎಂಬ ಪರಿಸ್ಥಿತಿಯನ್ನ ನಿರ್ಮಾಣ ಮಾಡುತ್ತೆ. ಯಾಕಂದರೇ ಐಪಿಎಲ್ ಸೀಸನ್ ನಲ್ಲಿ ಸಿನಿಮಾಗಳನ್ನ ರಿಲೀಸ್ ಮಾಡಿದ್ರೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗೋಲ್ಲ ಅನ್ನೋ ಮಾತಿದೆ. ಇದೇ ಕಾರಣಕ್ಕೆ ಈ ಬಾರಿ ಕೆಲ ಸಿನಿಮಾಗಳಿಗೆ ಆತಂಕ ಶುರುವಾಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ತ್ರಿ ಆರ್ ಸಿನಿಮಾ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ, ವಿಜಯ್ ಅಭಿನಯದ ಬೀಸ್ಟ್, ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ, ಮೆಗಾಸ್ಟಾರ್ ಚಿರಂಜೀವಿಯ ಆಚಾರ್ಯ ಸಿನಿಮಾಗಳ ನಿರ್ಮಾಪಕರು ಐಪಿಎಲ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಅಲ್ಲದೆ ಸಿನಿಮಾದ ರಿಲೀಸ್ ಡೇಟ್ ಗಳನ್ನೂ ಮುಂದಕ್ಕೆ ಹಾಕುವ ಚಿಂತನೆಯಲ್ಲಿದ್ದಾರೆಂತೆ.
IPL vs Cinemas Ram charan RRR Yash KGF 2