Bheemla-nayak | ಟ್ರೈಲರ್ ನೋಡಿ ಅಬ್ಬಾ ಎಂದಿದ್ಯಾಕೆ ಸುದೀಪಿಯ್ಸ್
ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಮಿಶ್ರ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಪವನ್ ಕಲ್ಯಾಣ್, ನಟ ರಾಣಾ ದಗ್ಗೂಬಾಟಿ ನಟನೆಯ ಸಿನಿಮಾ ಆಗಿರೋದ್ರಿಂದ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಸಿನಿಮಾ ಇದೇ ತಿಂಗಳ 25 ರಂದು ರಿಲೀಸ್ ಆಗಲಿದೆ. ಚಿತ್ರ ಹೇಗೆ ಇದ್ದರೂ ಪವನ್ ಕಲ್ಯಾಣ್ ಇರೋದ್ರಿಂದ ಕಲೆಕ್ಷನ್ ನಲ್ಲಿ ಹಿಂದೆ ಬೀಳೋದಿಲ್ಲ.
ಇದು ಏನೇ ಇರಲಿ.. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಬಗ್ಗೆ ಮಾತನಾಡೋದಾದ್ರೆ, ಭೀಮ್ಲಾ ನಾಯಕ್ ಸಿನಿಮಾ ಟ್ರೈಲರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಆಗಿದೆ. ಯುಟ್ಯೂಬ್ ನಲ್ಲಿ ಟ್ರೈಲರ್ ನಂಬರ್ 1 ಟ್ರೆಂಡಿಂಗ್ ನಲ್ಲಿ ಇದೆ. ಈ ಮಧ್ಯೆ ಸಿನಿಮಾದ ಟ್ರೈಲರ್ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಅಬ್ಬಾ..! ಒಳ್ಳೆದಾಯ್ತು.. ಅಂತಾ ನಿಟ್ಟುಸಿರು ಬಿಡುತ್ತಿದ್ದಾರೆ.
ಯಾಕಂದರೇ ಈ ಸಿನಿಮಾ ಸೆಟ್ಟೇರಿದಾಗ ರಾಣಾ ನಿರ್ವಹಿಸಿರುವ ಪಾತ್ರವನ್ನ ನಮ್ಮ ಕಿಚ್ಚ ಸುದೀಪ್ ಮಾಡಲಿದ್ದಾರೆ. ಪವನ್ ಕಲ್ಯಾಣ್ ಮುಂದೆ ಬಾದ್ ಶಾ ಅಬ್ಬರಿಸಲಿದ್ದಾರೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಸುದೀಪ್ ಈ ಸಿನಿಮಾದಿಂದ ತಪ್ಪಿಕೊಂಡರು. ಇದಕ್ಕೆ ಕಾರಣ ಏನೂ ಅಂತಾ ಈವರೆಗೂ ತಿಳಿದಿಲ್ಲ. ಆದರೆ ಕತೆಯ ಕಾರಣಕ್ಕೆ ಸುದೀಪ್ ಆ ಸಿನಿಮಾವನ್ನು ಕೈಬಿಟ್ಟಿರುವ ಸಾಧ್ಯತೆ ಇದೆ. ಅದೂ ಅಲ್ಲದೆ ‘ಭೀಮ್ಲಾ ನಾಯಕ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಸುದೀಪ್ ‘ವಿಕ್ರಾಂತ್ ರೋಣ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.
ಅದು ಏನೇ ಇದ್ದರೂ ಸುದೀಪ್ ಈ ಸಿನಿಮಾದಲ್ಲಿ ನಟಿಸದೇ ಇದ್ದದ್ದು, ಒಳ್ಳೇದಾಯ್ತು ಅಂತಾ ಕಿಚ್ಚನ ಅಭಿಮಾನಿಗಳು ಎಂದುಕೊಳುತ್ತಿದ್ದಾರೆ. ಯಾಕಂದರೆ ‘ಭೀಮ್ಲಾ ನಾಯಕ್’ ಸಿನಿಮಾ ಸಂಪೂರ್ಣವಾಗಿ ಪವನ್ ಕಲ್ಯಾಣ್ರ ಪಾತ್ರದ ಮೇಲಷ್ಟೆ ಕೇಂದ್ರೀಕೃತಗೊಳಿಸಿರುವುದು ಟ್ರೇಲರ್ನಿಂದಲೇ ಗೊತ್ತಾಗುತ್ತಿದೆ. ರಾಣಾ ದಗ್ಗುಬಾಟಿ ಪಾತ್ರವನ್ನು ‘ಡಮ್ಮಿ’ ಮಾಡಲಾಗಿದೆ. ಪವನ್ ಹೀರೋಯಿಸಂ ತೋರಿಸಲು ರಾಣಾರ ಪಾತ್ರವನ್ನು ಬಳಸಿಕೊಳ್ಳಲಾಗಿರುವುದು ಟ್ರೇಲರ್ನಿಂದಲೇ ಗೊತ್ತಾಗುತ್ತಿದೆ. ಒಂದೊಮ್ಮೆ ಸುದೀಪ್ ಈ ಸಿನಿಮಾದಲ್ಲಿ ನಟಿಸಿದ್ದರೆ ಅವರ ಪಾತ್ರ ಡಮ್ಮಿ ಆಗಿರುತ್ತಿತ್ತು. ಹಾಗಾಗಿ ಸುದೀಪ್ ಒಳ್ಳೆಯ ನಿರ್ಣಯ ಮಾಡಿದ್ದಾರೆಂದು ಅಭಿಮಾನಿಗಳು ಖುಷಿಯಿಂದಿದ್ದಾರೆ.
kiccha sudeep-pawan kalyan-bheemla-nayak-movie