ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಲಲಿತಾ ವಿಧಿವಶ
ಎರಡು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂನ ಖ್ಯಾತ ನಟಿ ಲಲಿತಾ ಅವರು ವಿಧಿವಶರಾಗಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಲಲಿತಾ ಅವರು, ‘ಕೇರಳ ಪೀಪಲ್ಸ್ ಆರ್ಟ್ ಕ್ಲಬ್’ ರಂಗ ತಂಡದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು.
‘ಕೂಟುಕುಟುಂಬಂ’ ಸಿನಿಮಾದ ಮೂಲಕ 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಲಲಿತಾ ಅವರು, ಮಲಯಾಳಂನ ಬಹುತೇಕ ಸೂಪರ್ ಸ್ಟಾರ್ ಗಳ ಜತೆ ನಟಿಸಿದ್ದಾರೆ.
ಸಂದೇಶಂ, ಅಮರಂ, ಆರವಂ, ಗಾಡ್ ಫಾದರ್ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಎರಡು ಬಾರಿ ಅತ್ಯುತ್ತಮ ಪೋಷಕಿ ನಟಿ ರಾಷ್ಟ್ರ ಪ್ರಶಸ್ತಿ ಬಂದಿದೆ.
malayalam-actress-lalitha-passes-away