Ram Charan | ಭೀಮ್ಲಾ ನಾಯಕ್ ಟ್ರೈಲರ್ ಗೆ ಮೆಗಾಪವರ್ ರಿವ್ಯೂ
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾ ಟ್ರೈಲರ್ ಬಗ್ಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ರಿವ್ಯೂ ನೀಡಿದ್ದಾರೆ.
ಭೀಮ್ಲಾ ನಾಯಕ್ ಟ್ರೈಲರ್ ಎಲೆಕ್ಟ್ರಿಫೈಯಿಂಗ್ ರೀತಿ ಇದೆ. ಪವನ್ ಕಲ್ಯಾಣ್ ಅವರ ಪ್ರತಿ ಡೈಲಾಗ್, ಆಕ್ಷನ್ ಪವರ್ ಫುಲ್ ಆಗಿದೆ ಎಂದಿದ್ದಾರೆ.
ಅಲ್ಲದೇ ನನ್ನ ಸ್ನೇಹಿತ ರಾಣಾ ಕಾಣಿಸಿಕೊಂಡ ರೀತಿ ಸೂಪರ್ ಆಗಿದೆ.
ತ್ರಿವಿಕ್ರಮ್ ಶ್ರೀನಿವಾಸ್, ಸಾಗರ್ ಕೆ ಚಂದ್ರ, ನಿತ್ಯ ಮೆನನ್, ಸಿತಾರಾ ಎಂಟರ್ ಟೈನ್ಮೆಂಟ್ಸ್, ತಮನ್ ಗೆ ಆಲ್ ದಿ ಬೆಸ್ಟ್ ಎಂದು ಟ್ವೀಟ್ ಮಾಡಿದ್ಧಾರೆ.
ಭೀಮ್ಲಾ ನಾಯಕ್ ಚಿತ್ರ ಫೆಬ್ರವರಿ 25 ರಂದು ತೆರೆಗೆ ಬರಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಫೆ.21ರಂದು ‘ಭೀಮ್ಲಾ ನಾಯಕ್’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ.
ಚಿತ್ರದ ಟ್ರೇಲರ್ ನೋಡಿದ ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಏತನ್ಮಧ್ಯೆ, ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಫೆಬ್ರವರಿ 21 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
Mega power star ram-charan-response-bheemla-nayak-trailer