RJ Rachana : ಆರ್ ಜೆ ರಚನಾ ಹೃದಯಾಘಾತದಿಂದ ನಿಧನ
ರೇಡಿಯೋ ಚಾನೆಲ್ ರೇಡಿಯೋ ಮಿರ್ಚಿಯಲ್ಲಿ ತನ್ನ ಉತ್ಸಾಹಭರಿತ ಕಾರ್ಯಕ್ರಮಗಳ ಮೂಲಕ ಮನ ಗೆದ್ದಿದ್ದ ಕನ್ನಡದ ಜನಪ್ರಿಯ ರೇಡಿಯೋ ಜಾಕಿ (RJ) ರಚನಾ ಅವರು ಫೆಬ್ರವರಿ 22, ಮಂಗಳವಾರದಂದು ನಿಧನರಾದರು.
(RJ) ರಚನಾ ಅವರು ರೇಡಿಯೊ ಕೇಳುಗರಲ್ಲಿ ಅಚ್ಚುಮೆಚ್ಚಿನವರಾಗಿದ್ದರು ಮತ್ತು ಅವರ ಮಾತಿನ ಕೌಶಲ್ಯ, ಹಾಸ್ಯ ಪ್ರಜ್ಞೆ ಮತ್ತು ಕೇಳುಗರ ಮನ ಮೆಚ್ಚಿಸುವ ಸಾಮರ್ಥ್ಯಕ್ಕಾಗಿ ಅನೇಕರು ಅವರ ಅಭಿಮಾನಿಗಳೂ ಆಗಿದ್ದರು. ರಚನಾ ಅವರ ಸಾವು ಅವರ ಅಭಿಮಾನಿಗಳು ಮತ್ತು ರಾಜ್ಯದ ಮನರಂಜನಾ ಉದ್ಯಮದ ಸದಸ್ಯರಿಗೆ ಆಘಾತವನ್ನುಂಟು ಮಾಡಿದೆ.
ಒಂದು ದಶಕದ ಕಾಲ ರೇಡಿಯೋ ಜಾಕಿಯಾಗಿದ್ದ ಇವರು ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ವೃತ್ತಿಗೆ ವಿದಾಯ ಹೇಳಿದ್ದರು.. ಆ ಸಮಯದಲ್ಲಿ, ಅವರು ಬೆಂಗಳೂರಿನ ಅತ್ಯಂತ ಜನಪ್ರಿಯ RJ ಗಳಲ್ಲಿ ಒಬ್ಬರಾಗಿದ್ದರು.. ಅಲ್ಲದೇ ರಕ್ಷಿತ್ ಶೆಟ್ಟಿ ನಟನೆಯ ‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.
ರಚನಾ ನಿಧನಕ್ಕೆ ನಟ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.. ನೀವು #RJRachana ಪ್ರೀತಿಯಿಂದ ಸದಾ ನೆನಪಿನಲ್ಲಿರುತ್ತೀರಾ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
You will be fondly remembered #RJRachana! Sending my deepest condolences to the family. Om shanti! pic.twitter.com/H5wRr70L7k
— Rakshit Shetty (@rakshitshetty) February 22, 2022
ಆರ್ಜೆ ಪ್ರದೀಪ್ ಅವರು ರಚನಾ ಜೊತೆಗಿನ ಫೋಟೋ ಹಂಚಿಕೊಂಡು , ಈ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗಿರುವುದಕ್ಕೆ ಆಘಾತೊವಾಗಿದೆ ಎಂದಿದ್ದು , ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ರಚನಾ ಎಂದು ಬರೆದುಕೊಂಡಿದ್ದಾರೆ.. ಮಾಜಿ ಆರ್ಜೆ ಮತ್ತು ನಟಿ ಸುಜಾತಾ ಅಕ್ಷಯ್ ಅವರು ರಚನಾ ಮತ್ತು ಸೆಲೆಬ್ರಿಟಿಗಳೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿ “ ಇದನ್ನ ನಂಬಲು ಸಾಧ್ಯವಾಗುತ್ತಿಲ್ಲ. ಓಂ ಶಾಂತಿ. ನಮ್ಮ ಸ್ನೇಹವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ರಾಚು ಎಂದು ಬರೆದುಕೊಂಡಿದ್ದಾರೆ.
ಕನ್ನಡ ನಟ, ಟಿವಿ ನಿರೂಪಕ ನಿರಂಜನ್ ದೇಶಪಾಂಡೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಂತಾಪ ಸೂಚಿಸಿದ್ದು , ” ಇದು ಗಂಭೀರ ಮತ್ತು ಆಘಾತಕಾರಿ ಸುದ್ದಿ. ಇನ್ನೂವರೆಗೂ ನಂಬಲು ಸಾಧ್ಯವಾಗುತ್ತಿಲ್ಲ. RIP ರಚನಾ.” ಎಂದು ಬರೆದುಕೊಂಡಿದ್ದಾರೆ.. ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಜೆಪಿ ನಗರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿದ್ದಾಗ ರಚನಾ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿಯೇ ರಚನಾ ಕೊನೆಯುಸಿರೆಳೆದರು..
Cant believe she isn't anymore.
Rachna famously known as pori tapori rachna, one of the famous RJs of Bangalore passed away today.
Never imagined this bubbly,super talented would leave us so soon.
Rest in peace Rachhu. pic.twitter.com/Zl4Eo4AXoO— Lavanya Ballal Jain (@LavanyaBallal) February 22, 2022