Ayogya | ಏನಮ್ಮಿ ಏನಮ್ಮಿ ಯಾರಮ್ಮಿ ನಿನ್ನಮ್ಮಿ ಸಾಂಗ್ ಗೆ 100M ಸಂಭ್ರಮ
ಸ್ಟಾರ್ ಸಿಂಗರ್ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದ ಏನಮ್ಮಿ ಏನಮ್ಮಿ ಹಾಡು ಪಡ್ಡೆ ಹೈಕ್ಳ ಹೃದಯ ಗೆದ್ದಿದೆ.
2018 ರಲ್ಲಿ ರಿಲೀಸ್ ಆದ ಅಯೋಗ್ಯ‘ ಸಿನಿಮಾದ ‘ಏನಮ್ಮಿ..‘ ಏನಮ್ಮಿ ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಇದೀಗ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.
ಈ ಮೂಲಕ ಯೂ ಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಹಾಡುಗಳ ಪೈಕಿ ಇದು ಕೂಡ ಒಂದಾಗಿದೆ.
ಈ ಹಿಂದೆ ಹಾಡು ಬಿಡುಗಡೆಯಾದ ಐದುವರೆ ತಿಂಗಳಿನಲ್ಲಿ 50 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು.
ಇನ್ನು ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಚೇತನ್ ಕುಮಾರ್ ಸಾಹಿತ್ಯವಿದೆ.
ಚೇತನ್ ಕೆರಿಯರ್ ನಲ್ಲಿ ಬರೆದ ಬೆಸ್ಟ್ ಹಾಡುಗಳ ಪಟ್ಟಿಗೆ ಈಗ ‘ಏನಮ್ಮಿ ಏನಮ್ಮಿ..‘ ಕೂಡ ಒಂದು.
ಸಾಹಿತ್ಯಕ್ಕೆ ತಕ್ಕಂತೆ ಅರ್ಜುನ್ ಜನ್ಯ ಮ್ಯೂಜಿಕ್ ಕಂಪೋಸ್ ಮಾಡಿದ್ದು, ಹಾಡಿನ ಯಶಸ್ಸಿಗೆ ಕಾರಣವಾಗಿದೆ.
ಅಯೋಗ್ಯ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶನ ಮಾಡಿದ್ದರು. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
100M Celebration of the song ‘yennami yenammi