‘ದ್ರೋಣ ಪಡೆ’ಗೆ ಸಾಥ್ ಕೊಟ್ಟ ಲವ್ಲಿ ಸ್ಟಾರ್ ಪ್ರೇಮ್
ಕರಾಟೆ, ಡ್ಯಾನ್ಸ್, ಜಿಮ್ನಾಸ್ಟಿಕ್ಸ್, ಕುಂಫು, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಕಂಪು ಚೆಲ್ಲಿರುವ ಸಕಲ ಕಲಾ ವಲ್ಲಭ ಚಾಮರಾಜ್ ಮಾಸ್ಟರ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸಮರ ಕಲೆಯಾಧಾರಿತ ದ್ರೋಣ ಪಡೆ ಎಂಬ ಸಿನಿಮಾಗೆ ಚಾಮರಾಜ್ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದ ಟೈಟಲ್ ನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಗುರು ಶಿಷ್ಯರ ಮಹತ್ವ ಸಾರುವ ದ್ರೋಣ ಪಡೆ ಸಿನಿಮಾದಲ್ಲಿ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್, ಅನಿಲ್ (Limca record holdrer ಮತ್ತು ಜೂನಿಯರ್ ಜೋಗಿ) ಶ್ರೀಹರ್ಷ, ನೇತ್ರ, ಅರುಣ್, ಚಂದ್ರಶೇಖರ್ , ಶ್ರೀನಿವಾಸ ಮಂಜು , ಯಜಮಾನ ಸಿನಿಮಾ ಖ್ಯಾತಿಯ ಜಹಾಂಗೀರ್, ಡ್ಯಾನಿ ಕುಟ್ಟಪ್ಪ , ಭಜರಂಗಿ 2 ಖ್ಯಾತಿಯ ಚೆಲುವರಾಜು, ವರುಣ್ ನಟಿಸಿದ್ದಾರೆ. ಚಾಮರಾಜ್ ಮಾಸ್ಟರ್ ಶಿಷ್ಯದಿಂದರು ಈ ಸಿನಿಮಾದಲ್ಲಿ ನಟಿಸ್ತಿರುವುದು ವಿಶೇಷ.
ದ್ರೋಣ ಪಡೆ ಸಿನಿಮಾಗೆ ಸತೀಶ್ ಆರ್ಯನ್ ಮ್ಯೂಸಿಕ್ ನೀಡಿದ್ದು, ವಿ.ನಾಗೇಂದ್ರ ಪ್ರಸಾದ್, ಸತೀಶ್ ಆರ್ಯನ್, ಶಿವರಾಮ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಕೊಳ್ಳೇಗಾಲ, ಮಂಗಳೂರು ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಶೇಕಡ 90 ಭಾಗ ಕಂಪ್ಲೀಟ್ ಆಗಿದ್ದು, ಉಳಿದ ಭಾಗದ ಕೆಲಸ ನಡೆಯುತ್ತಿದೆ.
ಚಾಮರಾಜ್ ಮಾಸ್ಟರ್ ತಮ್ಮದೇ ಚಾಮರಾಜ್ ಕ್ರಿಯೇಷನ್ ನಡಿ ಒಂದಷ್ಟು ಸ್ನೇಹಿತರಾದ ಎಂಕೆ ಸನ್ಸ್, ಗಗನ್ ಸತೀಶ್, ಜಗದೀಶ್, ಶ್ರೀನಿವಾಸ್ ಮಂಜುಳಾ ಜೊತೆಗೂಡಿ ದ್ರೋಣ ಪಡೆ ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ. ಉಳಿದಂತೆ ವಿಘ್ನೇಷನ್, ಯೂಸಿನ್ ಡಿಸೋಜಾ ಕ್ಯಾಮೆರಾ ಕೈಚಳಕ, ಅರ್ಜುನ್ ಕಿಟ್ಟು ಎಡಿಟಿಂಗ್, ಆರ್ಟ್ ಡೈರೆಕ್ಟರ್ ಆಗಿ ಪುರುಷೋತ್ತಮ್, ಮಹೇಶ್ ದ್ರೋಣ ಪಡೆ ಚಿತ್ರದಲ್ಲಿ ಕೆಲಸ ನಿರ್ವಹಿಸಿದ್ದಾರೆ.