‘ಗಂಗೂಬಾಯಿ’ ನಾಳೆ ರಿಲೀಸ್… ಟೈಟಲ್ ಚೇಂಜ್ ಮಾಡಿ ಎಂದ ಸುಪ್ರೀಂ ಕೋರ್ಟ್ …!!!
ಮುಂಬೈ : ಆಲಿಯಾ ಭಟ್ , ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನ್ ನ ಸಿನಿಮಾ ಗಂಗೂಬಾಯಿ ಕಾಥೇಯವಾಡಿ ನಾಳೆ ರಿಲೀಸ್ ಆಗ್ತಿದೆ.
ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.. ಹಾಗೆಯೇ ಸಿನಿಮಾ ರಿಲೀಸ್ ಆಗಬಾರದೆಂದು ಅನೇಕರು ವಿರೋಧಿಸಿದ್ದಾರೆ.. ಟೈಟಲ್ , ಸ್ಟೋರಿ ಲೈನ್ ಪಾತ್ರದಿಂದ ಈ ಸಿನಿಮಾ ಆರಂಭದಿಂದಲೇ ವಿವಾದಗಳಿಂದಲೇ ಸುದ್ದಿಯಲ್ಲಿರುವುದು ಹೆಚ್ಚು
ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದು ಇತ್ತೀಚೆಗಷ್ಟೇ ರಿಲೀಸ್ ಆದ ಸಿನಿಮಾದ ಟ್ರೇಲರ್. ಈ ಸಿನಿಮಾ ಸತ್ಯಕಥೆಯಾಧಾರಿತ ಸಿನಿಮಾವಾಗಿದ್ದು , ಆಗ ಮುಂಬೈಗೆ ತನ್ನ ಕನಸು ನನಸಾಗಿಸಿಕೊಳ್ಳಲು ಬಂದು ವಂಚನೆಗೊಳಗಾಗಿ ರೆಡ್ ಲೈಟ್ ಏರಿಯಾದಲ್ಲಿ ಸಿಲುಕಿ ಮುಂದೆ ಅದೇ ಕಾಮಾಠಿಪುರವನ್ನ ಆಳಿದ ಗಂಗೂಬಾಯಿ ಕಥೆ…
ಇದೀಗ ಗಂಗೂಬಾಯಿ ಕಾಥೇಯವಾಡಿ ವಿವಾದದ ಸುಳಿಯಲ್ಲಿದೆ… ನ್ಯಾಯಾಲಯವು ಸಿನಿಮಾ ತಂಡಕ್ಕೆ ಟೈಟಲ್ ಬದಲಾಯಿಸಿಕೊಳ್ಳುವ ಸಲಹೆ ನೀಡಿದೆ.. ಆದ್ರೆ ಸಿನಿಮಾ ರಿಲೀಸ್ ಗೆ ಇನ್ನೊಂದೇ ದಿನ ಬಾಕಿಯಿರುವಾಗ ಸಿನಿಮಾ ಸುಪ್ರೀಂ ಕೋರ್ಟ್ ಸಲಹೆ ಒಪ್ಪಿ ಟೈಟಲ್ ಬದಲಾಯಿಸಿಕೊಳ್ಳಲಿದ್ಯಾ ಅನ್ನೋ ಪ್ರಶ್ನೆ ಮೂಡಿದೆ..
ಈ ಸಿನಿಮಾದ ಕುರಿತಾಗಿ ಸಾಕಷ್ಟು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸಿನಿಮಾ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಚಿತ್ರತಂಡಕ್ಕೆ ನ್ಯಾಯಾಲಯವು ಸಲಹೆ ನೀಡಿದೆ.
ಹೆಸರು ಬದಲಾಯಿಸುವುದರ ಜತೆಗೆ ಸಿನಿಮಾದ ಕಥೆಯೇ ಬಗ್ಗೆಯೇ ಆಕ್ಷೇಪ ವ್ಯಕ್ತ ಪಡಿಸಿ, ಗಂಗೂಬಾಯಿ ಅವರ ದತ್ತು ಪುತ್ರ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಅಲ್ಲದೇ, ಸಿನಿಮಾ ಬಿಡುಗಡೆಯನ್ನು ತಡೆಹಿಡಿಯಲು ಕೋರಿ ನ್ಯಾಯಾಲಯಗಳ ಮುಂದೆ ಹಲವಾರು ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ.
ಬನ್ಸಾಲಿ ಪ್ರೊಡಕ್ಷನ್ಸ್ನ ವಕೀಲ ಸಿದ್ಧಾರ್ಥ ದವೆ ಅವರು ಸಲಹೆಯ ಬಗ್ಗೆ ತಮ್ಮ ಕಕ್ಷಿದಾರ ಜೊತೆ ಮಾತನಾಡಿ ಸೂಚನೆಗಳನ್ನು ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಮುಂದುವರಿಯಲಿದೆ.