ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಟರಾಜ್…ಬರ್ತ್ ಡೇ ದಿನ ಹೊಸ ಸಿನಿಮಾ ಘೋಷಿಸಿದ ಚಿಕ್ಕಮಗಳೂರಿನ ಪ್ರತಿಭೆ
ಬಣ್ಣದ ಲೋಕ ಎಂಬ ಸಮುದ್ರದಲ್ಲಿ ಈಜಿ ದಡ ಸೇರೋದು ಇದೆಲ್ಲಾ ಅದು ಸುಲಭದ ಮಾತಲ್ಲ. ಗಾಡ್ ಫಾದರ್ ಇಲ್ಲದೇ ಬೆಳೆಯೋದು ಕಷ್ಟದ ಮಾತೇ ಸರಿ. ಈ ಕಷ್ಟದ ಹಾದಿ ಮೆಟ್ಟಿ ಈಗ ಈಗ ಒಂದಾಗಿ ಸಿನಿಮಾ ಕನಸುಗಳನ್ನು ಈಡೇರಿಸಿಕೊಳ್ಳುತ್ತಿರುವ ಭರವಸೆ ನಟ ನಟರಾಜ್.. ಮೂಲತಃ ಚಿಕ್ಕಮಗಳೂರಿನ ಕಡೂರಿನವರಾದ ನಟರಾಜ್ ಕಾನೂನು ಪದವೀದರರು. ಕಾನೂನು ಪದವಿ ಪಡೆದು ವಕೀಲ ವೃತ್ತಿಗಿಂತ ಅವರನ್ನು ಸೆಳೆದಿದ್ದು ಸಿನಿಮಾಲೋಕ. ಹೀಗಾಗಿ ಸಿನಿಮಾ ಕಡೆ ಬಂದ ನಟರಾಜ್ ಈಗ ಕನ್ನಡದ ಭರವಸೆ ಹಾಗೂ ಬ್ಯುಸಿಯೆಸ್ಟ್ ನಟ. ಅಷ್ಟಕ್ಕೂ ನಾವೀಗ ನಟರಾಜ್ ಅವರ ಬಗ್ಗೆ ಹೇಳೋದಿಕ್ಕೆ ಕಾರಣ ಅವರ ಹುಟ್ಟುಹಬ್ಬ. ನಟರಾಜ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾಗಳ ಪೋಸ್ಟರ್ ಜೊತೆಗೆ ಮತ್ತೆರೆಡು ಸಿನಿಮಾಗೂ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ರಾಮಾ ರಾಮಾ ರೇ ಸಿನಿಮಾ ಸೂಪರ್ ಹಿಟ್ ನಂತರ ನಟರಾಜ್ ಅವರಿಗೆ ಸಾಲು ಸಾಲು ಅವಕಾಶಗಳು ಹರಿಸಿ ಬರ್ತಿದೆ. ಸದ್ಯಕ್ಕೀಗ ನಟರಾಜ್ ಮ್ಯಾನ್ ಆಫ್ ದಿ ಮ್ಯಾಚ್, ಮಾರೀಚ ಹಾಗೂ ಕುಸುಬ ಸಿನಿಮಾಗಳು ರಿಲೀಸ್ ಗೆ ಸಜ್ಜಾಗಿವೆ ನಿಂತಿವೆ. ಈಸಿನಿಮಾಗಳ ಜೊತೆಗೆ ಮತ್ತೆ ಮೂರು ಸಿನಿಮಾಗಳನ್ನು ನಟರಾಜ್ ಒಪ್ಪಿಕೊಂಡಿದ್ದಾರೆ.
ಗೆಳೆಯನ ಚಿತ್ರಕ್ಕೆ ಡಾಲಿ ಸಾಥ್!
ಕನ್ನಡದ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಕುಬುಸ ಕಥೆ ಇದೇ ಹೆಸರಿನಲ್ಲಿ ಸಿನಿಮಾವಾಗ್ತಿದೆ. ಈ ಚಿತ್ರದಲ್ಲಿ ನಟರಾಜ್ ನಾಯಕನಾಗಿ ಬಣ್ಣ ಹಚ್ಚಿದ್ದು, ಈ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ರೇಣುಕಾ ರಾಮ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಕುಬುಸ ಸಿನಿಮಾದ ಫಸ್ಟ್ ಲುಕ್ ನಟರಾಜ್ ಬರ್ತ್ ಡೇಗೆ ರಿಲೀಸ್ ಆಗಿದೆ. ನಟರಾಕ್ಷಸ ಡಾಲಿ ಧನಂಜಯ್ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಂದಹಾಗೇ ಕುಬುಸ ಸಿನಿಮಾಗೆ ವಿ ಶೋಭಾ ಶರ್ಮಾ ಬಂಡವಾಳ ಹಾಕಿದ್ದು, ಚೇತನ್ ಶರ್ಮಾ ಕ್ಯಾಮೆರಾ, ಪ್ರವೀಣ್ ಚಂದ್ರ ಮ್ಯೂಸಿಕ್ ಚಿತ್ರಕ್ಕಿದೆ.
ಉಳಿದಂತೆ ನಟರಾಜ್ ನಟನೆಯ ಮಾರಿಚ ಸಿನಿಮಾಗೆ ಸುಧೀರ ಶಾನ್ ಬಾಗ್ ಸಿಂಗ್ ಆಕ್ಷನ್ ಕಟ್ ಹೇಳಿದ್ದು, ಗೌತಮ್ ಜೋಶ್ನಾ ನಿರ್ಮಾಣ ಮಾಡಿದ್ದು, ಗಣೇಶ್ ಹೆಗಡಿ ಕ್ಯಾಮೆರಾ ಕೈಚಳಕ ಸುನಾದ್ ಸಂಗೀತ ಚಿಕ್ಕಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಆಗೋದು ಬಾಕಿ ಇದೆ. ಇನ್ನೂ ಹೆಸರಿಡದ ಚಿತ್ರವೊಂದ್ರಲ್ಲಿ ನಟರಾಜ್ ನಟಿಸಿದ್ದು, ಪೂರ್ಣಿಮಾ ಪ್ರೊಡಕ್ಷನ್ ನಡಿ ಪೂರ್ಣಿಮಾ ಎಸ್, ರಮೇಶ್ ಗೌಡ ಹಾಗೂ ಭಾಸ್ಕರ್ ರಾವ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.ಈ ಸಿನಿಮಾಗಳ ಜೊತೆಗೆ ನಟರಾಜ್ ಭತ್ತಳಿಕೆಯಲ್ಲಿ ಎರಡು ಸಿನಿಮಾಗಳಿವೆ.