#BheemlaNayak | ಭೀಮ್ಲಾ ನಾಯಕ್ ಹೊಸ ಟ್ರೈಲರ್ ಹೇಗಿದೆ..
ಪವನ್ ಕಲ್ಯಾಣ್ ಮತ್ತು ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಭೀಮ್ಲಾ ನಾಯಕ್‘ ಮಲ್ಟಿಸ್ಟಾರರ್ ಸಿನಿಮಾದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ.
ಬುಧವಾರ ಹೈದರಾಬಾದ್ ನ ಯೂಸುಫ್ ಗೂಡ ಪೊಲೀಸ್ ಮೈದಾನದಲ್ಲಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಿತು.
ತೆಲಂಗಾಣ ರಾಜ್ಯದ ಸಚಿವರಾದ ಕೆಟಿಆರ್, ತಲಸಾನಿ ಶ್ರೀನಿವಾಸ್ ಯಾದವ್ ಮತ್ತು ಶಾಸಕ ಮಾಗಂಟಿ ಗೋಪಿನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಪ್ರೀ ರಿಲೀಸ್ ಫಂಕ್ಷನ್ ಹಿನ್ನೆಲೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ.
ಅಂದಹಾಗೆ ಈ ಹಿಂದಿನ ಟ್ರೇಲರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬ್ಯಾಕ್ಗ್ರೌಂಡ್ ಸ್ಕೋರ್ ಮತ್ತು ಟ್ರೇಲರ್ ಕಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಹೀಗಾಗಿ ಸಿನಿಮಾ ತಂಡ ಹೊಸ ಟ್ರೇಲರ್ ರಿಲೀಸ್ ಮಾಡಿದೆ. ಆ ಮೂಲಕ ಮಾಸ್ ಪವರ್ ಜಾತ್ರೆಗೆ ಮತ್ತಷ್ಟು ಜೋಷ್ ನೀಡಿದೆ.
ಒಟ್ಟಾರೆಯಾಗಿ, ಹಿಂದಿನ ಟ್ರೇಲರ್ಗೆ ಹೋಲಿಸಿದರೆ ಹೊಸ ಟ್ರೇಲರ್ ಒಂದು ಹೆಜ್ಜೆ ಮುಂದಿದೆ. ಭೀಮ್ಲಾ ನಾಯಕ್ ಚಿತ್ರವು ಫೆಬ್ರವರಿ 25 ರಂದು ಥಿಯೇಟರ್ಗಳಿಗೆ ಬರಲಿದೆ.
ಸಿನಿಮಾಗಾಗಿ ಮೆಗಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ನಾಳೆ ಆಂಧ್ರದಲ್ಲಿ ಪವರ್ ಸ್ಟ್ರೋಮ್ ಬರೋದು ಪಕ್ಕಾ ಎಂದು ಅಂದಾಜಿಸಲಾಗುತ್ತಿದೆ.
Pawan-kalyan-bheemla-nayak Trailer