ಚೇತನ್ ಅಹಿಂಸಾ ಬೆನ್ನಿಗೆ ನಿಂತ ಮೋಹಕ ತಾರೆ ರಮ್ಯಾ…!!
ನ್ಯಾಯಾಧೀಶರ ನಿಂದಸಿ ಟ್ವೀಟ್ ಮಾಡಿದ್ದ ಆರೋಪದಡಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ಅವರನ್ನ ಬಂಧಿಸಲಾಗಿದ್ದು , ಅವರನ್ನ 14 ದಿನಗಳ ಕಾಲ ನ್ಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..
ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ ಚೇತನ್ ಪರ ಮಾತನಾಡಿದ್ದಾರೆ.. ಚೇತನ್ ಅವರನ್ನು ವಶಕ್ಕೆ ಪಡೆದ ಬಳಿಕ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದಿದ್ದರು. ನಟನ ಪತ್ನಿ ಮೇಘಾ, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಯಾವುದೇ ಮಾಹಿತಿ ಇಲ್ಲದೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೈವ್ನಲ್ಲಿ ಹೇಳಿಕೊಂಡಿದ್ದರು.
ನಟಿ ರಮ್ಯಾ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ. ಚೇತನ್ ಮಾಡಿರುವ ಅಪರಾಧ ಏನು..?? ಅವರು ಮಾಡಿರುವ ಟ್ವೀಟ್ ನಲ್ಲಿ ಏನಿದೆ ಎಂದು ಚೇತನ್ ರ ನ್ಯಾಯಾಂಗ ಬಂಧನವನ್ನು ಪ್ರಶ್ನೆ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಚೇತನ್ ಬಂಧನಕ್ಕೆ ಕಾರಣ ಆಗಿರುವ ಟ್ವೀಟ್ ಗಳನ್ನು ಪೋಸ್ಟ್ ಮಾಡಿರುವ ರಮ್ಯಾ ಪೊಲೀಸರು ಚೇತನ್ ಅವರನ್ನು ಬಂಧಿಸುವಂತಹ ದೋಷ ಈ ಟ್ವೀಟ್ನಲ್ಲಿ ಏನಿದೆ..? ಎಂದು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಪೊಲೀಸರು ನಟ ಚೇತನ್ಅವರನ್ನು ಫೆಬ್ರವರಿ 22ರಂದು ವಶಕ್ಕೆ ಪಡೆದರು. 8ನೇ ಎಸಿಎಂಎಂ ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.