ಮಹಿಳಾ ಪ್ರಧಾನ ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ್ – 40 ಲಕ್ಷ ರೂ. ಸಂಭಾವನೆ..??
ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಗಮನ ಸೆಳೆದಿದ್ದ ನಟಿ ಶ್ವೇಶ್ರವಾತ್ಸವ್ ಅವರು ವಿವಾಹದ ನಂತರ ಮಗು ಜನಿಸಿದ ನಂತರ ಸಿನಿಮಾ ರಂಗದಿಂದ ಆದಷ್ಟು ಅಂತರ ಕಾಯ್ದುಕೊಂಡಿದ್ದರು…
ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ… ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಆಕ್ಟೀವ್ ಆಗುತ್ತಿರುವ ಶ್ವೇತಾ ಅವರು ಸದ್ಯ ಮಹಿಳಾ ಪ್ರಧಾನ ಸಿನಿಮಾವೊಂದನ್ನ ಮಾಡುತ್ತಿದ್ದು ಈ ಸಿನಿಮಾಗೆ ಅವರು 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ..
ಕಿರುಗೂರಿನ ಗೈಯ್ಯಾಳಿಗಳು, ಫೇರ್ ಅಂಡ್ ಲವ್ಲಿ ಸಿನಿಮಾಗಳಲ್ಲಿ ಶ್ವೇತಾ ನಟನೆ ಎಲ್ಲರ ಗಮನ ಸೆಳೆದಿತ್ತು.. ಸದ್ಯ ಲಾಂಗ್ ಗ್ಯಾಪ್ ಬಳಿಕ ಪೂರ್ಣ ಪ್ರಮಾಣದಲ್ಲಿ ಮತ್ತೆ ಸಿನಿಮಾ ಲೋಕಕ್ಕೆ ಕಮ್ ಬ್ಯಾಕ್ ಮಾಡ್ತಿರೋ ಸಿಂಪಲ್ ನಟಿ ಈಗ ಮಹಿಳಾ ಪ್ರಧಾನ ಸಿನಿಮಾಗೆ ಆಯ್ಕೆಯಾಗಿದ್ದು , ಈ ಸಿನಿಮಾಗಾಗಿ ಅವರಿಗೆ 40 ಲಕ್ಷ ರೂಪಾಯಿ ಸಂಭಾವನೆಯನ್ನ ನೀಡಿದ್ದಾರೆ ನಿರ್ಮಾಕರು ಅನ್ನೋ ಸುದ್ದಿ ಗಾಂಧಿನಗರದಲ್ಲಿ ಜೋರಿದೆ..