ಭೀಮ್ಲಾ ನಾಯಕ್ ಗೆ ಬ್ಲಾಕ್ ಬ್ಲಾಸ್ಟರ್ ರಿವ್ಯೂ ಕೊಟ್ಟ ಫ್ಯಾನ್ಸ್….
ಸಾಗರ್ ಕೆ ಚಂದ್ರು ನಿರ್ದೇಶನದ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿಯ ಅಭಿನಯದ ಭೀಮ್ಲಾ ನಾಯಕ್ ಇಂದು ಥಿಯೇಟರ್ ಗಳಿಗೆ ಲಗ್ಗೆ ಹಾಕಿದೆ. ಮಲಯಾಳಂನ ಸೂಪರ್ಹಿಟ್ ಚಿತ್ರ ಅಯ್ಯಪ್ಪನುಮ್ ಕೊಶಿಯುಮ್ನ ಅಧಿಕೃತ ತೆಲುಗು ರಿಮೇಕ್ ಚಿತ್ರ ತೆಲುಗಿನಲ್ಲೂ ಬ್ಲಾಕ್ ಬ್ಲಾಸ್ಟರ್ ಆಗುವ ಎಲ್ಲಾ ಲಕ್ಷಣಗಳಿವೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಪಾತ್ರದಲ್ಲಿ ಕ್ರಮವಾಗಿ ರಾಣಾ ದಗ್ಗುಬಾಟಿ ಮತ್ತು ಪವನ್ ಕಲ್ಯಾಣ್ ನಟಿಸಿದ್ದಾರೆ. ಪ್ರಪಂಚದಾದ್ಯಂತದ ಪ್ರೀಮಿಯರ್ ಶೋ ವಿಕ್ಷಿಸಿದ ಅಭಿಮಾನಿಗಳು ವಿಮರ್ಶೆಗಳನ್ನ ಹಂಚಿಕೊಳ್ಳುತಿದ್ದಾರೆ.
ಪವನ್ ಕಲ್ಯಾಣ್ ಭೀಮ್ಲಾ ನಾಯಕ್ ಪಾತ್ರದಲ್ಲಿ ನಟಿಸಿದ್ದರೆ, ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಡೇನಿಯಲ್ ಶೇಖರ್ ಆಗಿ ಕಾಣಿಸಿಕೊಂಡಿದ್ದಾರೆ. ಕೋವಿಡ್ ಕಾರಣಗಳಿಂದಾಗಿ ಚಿತ್ರದ ಬಿಡುಗಡೆ ಹಲವು ಭಾರಿ ಮುಂದಕ್ಕೋಗಿತ್ತು.
ಭೀಮ್ಲಾ ನಾಯಕ್ ಆರಂಭಿಕ ವಿಮರ್ಶೆಗಳ ಪ್ರಕಾರ ಚಿತ್ರ ನಿಜವಾಗಿಯೂ ಬ್ಲಾಕ್ಬಸ್ಟರ್ ಎಂದು ಸೂಚಿಸುತ್ತದೆ. ಚಿತ್ರಕ್ಕೆ ಎಸ್ ಥಮನ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅಭಿಮಾನಿಗಳು ಮೆಚ್ಚಿಕೊಳ್ಳುತ್ತಿದ್ದಾರೆ.
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅವರನ್ನ ಬಿಟ್ಟು ಭೀಮ್ಲಾ ನಾಯಕ್ನಲ್ಲಿ ನಿತ್ಯಾ ಮೆನನ್ ಮತ್ತು ಸಂಯುಕ್ತಾ ಮೆನನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಸಿತಾರಾ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ಸೂರ್ಯದೇವರ ನಾಗ ವಂಶಿ ನಿರ್ಮಿಸಿದ್ದಾರೆ.
Bheemla Nayak first reviews are out. Fans call Pawan Kalyan, Rana Daggubati film a blockbuster.